fbpx

ಯಾರೇ ಕೂಗಾಡಲಿ ಚಿತ್ರವಿಮರ್ಶೆ


ಯಾರೇ ಕೂಗಾಡಲಿ ಒಂದ್ಸಾರಿ ನೋಡಬಹುದು.

       ಹುಡುಗರು ಚಿತ್ರದಲ್ಲಿ ಯೋಗಿ ಹಾಗೂ ಪುನೀತ್ ಕಮಾಲ್ ಯಾರೇ ಕೂಗಾಡಲಿ ಚಿತ್ರದಲ್ಲೂ ಮುಂದುವರೆದಿದೆ. ಸಿರಿಯಸ್ ಆಗಿರೋ ಪುನೀತ್, ಕಾಮಿಡಿ ಮಾಡ್ತಾ ನಗಿಸೋ ಯೋಗಿ ಜುಗಲ್‌ಬಂದಿ ವರ್ಕೌಟ್ ಆಗಿದೆ. ಫ್ಯಾಮಿಲಿ ಎಲ್ಲ ಮುಜುಗರ ಇಲ್ಲದೇ ಚಿತ್ರವನ್ನ ನೋಡುವಂತೆ ನಿರ್ದೇಶಕ ಸಮುದ್ರಖಣಿ ಕಥೆ ತೋರಿಸಿದ್ದಾರೆ. ಫಸ್ಟ್ ಆಫ್ ಫನ್ನಿಯಾಗಿ ಸಾಗುತ್ತಾ ಪ್ರೇಕ್ಷಕರನ್ನು ಕುಳಿತುಕೊಳ್ಳುವಂತೆ ಮಾಡುವ ಗುಣ ಹೊಂದಿದೆ. ಸೆಕೆಂಡ್ ಆಫ್‌ನಲ್ಲಿ ಚಿತ್ರದ  ನಿಜವಾದ ಕಥೆ ತೆರೆದುಕೊಳ್ಳುತ್ತಾ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡು ಸಿನಿಮಾ ಮುಗಿದಾಗ ಒಂದೊಳ್ಳೇ ಸಿನಿಮಾ ನೋಡಿದೆ ಎನ್ನುವ ಭಾವ ಮೂಡತ್ತೆ.
         ತಲೆ ಕೆಟ್ಟೋನೊಬ್ಬ ಕೆಟ್ಟೋರ್‍ಗೂ ಒಳ್ಳೇದ್ನೇ ಬಯಸೋಣ ಎಂಬ ಉಪನಾಮದಡಿ  ಸೇವಾಧಾರಿತ ಸಂಸ್ಥೆ ತೆರೆದು ಜನಮನ್ನಣೆ ಗಳಿಸುತ್ತಾನೆ. ಅವನಿಗೆ ತಲೆ ಕೆಟ್ಟಿದೆ, ಹುಷಾರು ಎಂದು ಹುಡುಕಿಕೊಂಡು ಬರುವ ಆತನ ಸಂಬಂಧಿಕರು ಆತನನ್ನು ಪ್ರೀತಿಸುವ ಜನ ಭೀತಿಗೊಳಗಾಗುವಂತೆ ಮಾಡುತ್ತಾರೆ. ಅವನ ಜೊತೆಗೊಬ್ಬ ನಟೇಶ್ ಎನ್ನೋ ನಟೋರಿಯಸ್ ಕಾಯಿಲೆ ಇರುವ ಕಾಮಿಡಿ ಮ್ಯಾನ್ 
         ಸಿನಿಮಾ ಕತೆಗಳು ಬಹುತೇಕ ಬೇಸ್ ಆಗಿರುವುದು ಹೆಣ್ಣು, ಹೊನ್ನು ಮಣ್ಣಿನ ಮೇಲೆ. ಯಾರೇ ಕೂಗಾಡಲಿ ಸಿನಿಮಾ ಕೂಡಾ ಮಣ್ಣಿಗೆ ಅಂದರೆ ಆಸ್ತಿಗೆ ಸಂಬಂಧಿಸಿದಂತೆ ಸಂಬಂಧಿಕರ ಕತೆ. ಕತೆಯನ್ನು ಹೇಳಿರುವ ಶೈಲಿ ಅದ್ಭುತ. ಬಹುಶಃ ಈ ಕತೆ ಬೇರೆ ನಿರ್ದೇಶಕ ಕೈಯಲ್ಲಿ ಸಿಕ್ಕಿದ್ದರೆ ಸಿನಿಮಾ ಕೆಟ್ಟು ಹೋಗುತ್ತಿತ್ತೇನೋ. ಸಮುದ್ರ ಖಣಿ ಕತೆಯನ್ನು ಸಮುದ್ರದಲ್ಲಿ ಸಿಗುವ ಚಿಪ್ಪಿನ ಮುತ್ತಿನಂತೆ ಹೊಳೆಯುವಂತೆ ಮಾಡಿದ್ದಾರೆ. 
          ಸಿನಿಮಾ ಒಂಚೂರು ಬೋರ್ ಹೊಡೆಸಲ್ಲ. ಸೆಕೆಂಡ್ ಆಫ್‌ನಲ್ಲಿ ಫ್ಲ್ಯಾಶ್‌ಬ್ಯಾಕ್ ಇನ್ನೇನು ಬೋರ್ ಆಯ್ತು ಎನ್ನುವಷ್ಟರಲ್ಲಿ ಕತೆಗೆ ಮತ್ತೆ ಹಳಿಗೆ ಬರುತ್ತದೆ. ಆದರೆ ಕ್ಲ್ಯೆಮ್ಯಾಕ್ಸ ಯಾಕೋ ಪುನೀತ್ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತದೆ. ಉಳಿದಮತೆ ಯೋಗಿ ಹಾಗೂ ಪುನೀತ್ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಾರೆ. ಅದರಲ್ಲೂ ಯೋಗಿಗೆ ಈ ಸಿನಿಮಾದಲ್ಲೂ ಫುಲ್ ಮಾರ್ಕ್ಸು.
          ಚಿತ್ರದ ಸಂಭಾಷಣೆ ಸನ್ನಿವೇಶಗಳಿಗೆ ತಕ್ಕಂತೆ ಸೊಗಸಾಗಿದೆ. ಮುಖಕ್ಕೆ ಬೆಲೆ ಇಲ್ಲ, ಮುಖವಾಡಕ್ಕೆ ಬೆಲೆ ಎನ್ನುವ ಡೈಲಾಗ್ ಬದುಕಿನ ಮುಖವನ್ನು ಬಿಂಬಿಸುತ್ತದೆ. ಕೇಬಲ್‌ನ ಟೈಟ್ ಮಾಡೋ ಲೂಸು ಎನ್ನುವ ಮಾತು ಯೋಗಿಯ ಜನಪ್ರಿಯತೆಯನ್ನು ಎತ್ತಿ ಹಿಡಿಯುತ್ತದೆ. ೫ ನಿಮಿಷದಲ್ಲಿ ಇಷ್ಟು ಜನ ನಮ್ ಕಡೆ ತಿರುಗಿ ನೋಡೋ ಹಾಗೆ ಮಾಡದೀವಿ. ಆಯುಷ್ ಪೂರ್ತಿ ನಾವೂ ಏನೇನ್ ಸಾಧಿಸ್ತಿವಿ ಎಂಬುದನ್ನ ತೋರಿಸ್ತಿವಿ ಎನ್ನುವ ಮಾತು ಆತ್ಮವಿಶ್ವಾಸದ ಬಗ್ಗೆ ಒಳ್ಳೇ ಮಾತು. ಟಿಕೇಟ್ ರಿಸರ್ವ್ ಮಾಡಿಸಿದ್ದು ನಾನು ಟ್ರಾವೆಲ್ ಮಾಡ್ತಿರೋನು ಅವ್ನು ಎನ್ನುವಂತ ಸಾಲುಗಳು ಕಚಗುಳಿ ಇಡುತ್ತವೆ. 
           ಛಾಯಾಗ್ರಹಣದ ಬಗ್ಗೆ ಎರಡೂ ಮಾತಿಲ್ಲ. ಈ ಸಿನಿಮಾದಿಂದ ಹಣ ಬರಲಿ, ಬರದೇ ಇರಲಿ ಒಂದೊಳ್ಳೇ ಸಿನಿಮಾ ಪ್ರೇಕ್ಷಕರಿಗೆ ಕೊಡಬೇಕು ಎನ್ನುವ ನಿರ್ಮಾಪಕರ ಕಾಳಜಿ ಎದ್ದು ಕಾಣುತ್ತದೆ. ನಟನೆಯ ವಿಷಯದಲ್ಲಿ ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ನಟಿಸಿದ್ದಾರೆ. ಸಿಂಧು ಲೋಕನಾಥ್, ಭಾವನಾ, ನಿವೇದಿತಾ, ಪುನೀತ್, ಯೋಗಿ, ಶೋಭರಾಜ್, ರವಿಶಂಕರ, ಮಾಳವಿಕಾ, ಗೀರೀಶ್ ಕಾರ್ನಾಡ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವುದು ಮಾತ್ರವಲ್ಲ ಜೀವ ತುಂಬಿದ್ದಾರೆ. 
          ಅರಿಸ್ಟಾಟಲ್ ಅವರ ಮನುಷ್ಯ ಸಂಘಜೀವಿ ಎನ್ನುವ ಫಲಕದಿಂದ ಶುರುವಾಗುವ ಕತೆ ಕೊನೆಯವರೆಗೂ ಸೀಟಿನಲಲಿ ಕೂಡುವಂತೆ ಮಾಡುತ್ತದೆ. ನೀವು ಬದುಕಿ, ಬೇರೆಯವರನ್ನು ಬದುಕಲು ಬಿಡಿ ಎನ್ನುವ ಸಂದೇಶ ಜೊತೆಗೆ ಹುಚ್ಚರು ಯಾರೂ ಬೇಕು ಅಂತ ಹುಚ್ಚರಾಗಲ್ಲ, ಅವರಿಗೂ ಸಂಬಂಧಗಳ ಬೆಲೆ ಗೊತ್ತಿರುತ್ತೆ. ಸಂಬಂಧಿಕರೇ ಅವರನ್ನ ಹುಚ್ಚರನ್ನಾಗಿ ಮಾಡುತ್ತಾರೆ ಎನ್ನುವ ಬೋಧನೆಯೂ ಚಿತ್ರದಲ್ಲಿದೆ.   
            ಮಾಮೂಲಿ ಪ್ರಶ್ನೆಗಳಿಗೆ ಜನ ಉತ್ತರಿಸುವುದು ಕಷ್ಟ ಎಂದು ಹೇಳಿರುವ ನಿರ್ದೇಶಕರು ಚಂದ್ರನ ಮೇಲೆ ಮೊದಲು ಬಲಗಾಲಿಟ್ಟ ಮನುಷ್ಯ ಯಾರು ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ನಿರ್ದೇಶಕ ಸಮುದ್ರ ಖಣಿಗೆ ಹೇಳಿ.
-ಚಿತ್ರಪ್ರಿಯ ಸಂಭ್ರಮ್. 

Please follow and like us:
error

Leave a Reply

error: Content is protected !!