Breaking News
Home / Koppal News / ಜಿಲ್ಲಾ ಬಿಜೆಪಿ ಘಟಕದಿಂದ ಕೊಪ್ಪಳದಲ್ಲಿ ರೈಲು ತಡೆದು ಪ್ರತಿಭಟನೆ

ಜಿಲ್ಲಾ ಬಿಜೆಪಿ ಘಟಕದಿಂದ ಕೊಪ್ಪಳದಲ್ಲಿ ರೈಲು ತಡೆದು ಪ್ರತಿಭಟನೆ

 ರಾಷ್ಟ್ರೀಯ ಭಾರತೀಯ ಜನತಾ ಪಕ್ಷದ ಮುಖಂಡರ ಕರೆ ಮೇರೆಗೆ ದೇಶದಾಧ್ಯಂತ ರೈತ ಆಕ್ರೋಶ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ರೈತರು ಅನೇಕ ಸಂಕಷ್ಟ, ಸಮಸ್ಯೆಗಳನ್ನು ಏದುರಿಸುತ್ತಿದ್ದರೂ ರಾಜ್ಯ ಸರಕಾರವಾಗಲಿ, ಕೆಂದ್ರ ಸರ್ಕಾರವಾಗಲಿ ಮಧ್ಯ ಪ್ರವೇಶಿಸಿ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಶ್ಕ್ರೀಯಗೊಂಡಿರುವದನ್ನು ಖಂಡಿಸಿ ದೇಶದಾಧ್ಯಂತ ಪಕ್ಷದ ವತಿಯಿಂದ ರೈಲು ತಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದರಂತೆ ಕೊಪ್ಪಳ ನಗರದಲ್ಲಿ ಇಂದು ದಿ.೦೭-೦೨-೨೦೧೪ ರಂದು ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ನಗರದ ರೈಲ್ವೆ ನಿಲ್ದಾಣದಲ್ಲಿ  ರೈಲ್ವೆ ತಡೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಘಟಕ ತಿಳಿಸಿದೆ.
ರೈತರ ಪ್ರಮುಖ ಬೇಡಿಕೆಗಳಾದ ನಿಗಧಿಪಡಿಸಿದ ಕಬ್ಬಿನ ಬೆಂಬಲ ಬೆಲೆ ಕೂಡಲೇ ಜಾರಿಗೊಳಿಸಬೇಕು. ಎಲ್ಲಾ ರಸಗೊಬ್ಬರಗಳಿಗೆ ರಿಯಾಯಿತಿ ಧರ ನೀಡಬೇಕು. ಸ್ವಾಮಿನಾಥನ ವರದಿ ಯತಾವತ್ತಾಗಿ ಜಾರಿಗೊಳಿಸಬೇಕು. ರೈತ ನಷ್ಟ ಪರಿಹಾರ ಬೂಪೇಂದ್ರ ಸಿಂಗ್ (೨೦೧೦) ವರದಿ ಜಾರಿಗೆ ಬರಬೇಕು. ರಾಷ್ಟ್ರ ನದಿಗಳ ಜೋಡಣೆ ಅನುಷ್ಟಾನಗೊಳಿಸಬೇಕು. ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯು ೨ ವರ್ಷದೊಳಗೆ ಬೇಡಿಕೆ ಈಡೇರದಿದ್ದರೆ ಭೂಮಿಯನ್ನು ರೈತರಿಗೆ ವಾಪಾಸ್ ಬಿಟ್ಟುಕೊಡಬೇಕು. ತೊಗರಿ ಖರೀದಿ ಮಿತಿಯನ್ನು ಸಡಿಲಗೊಳಿಸಬೇಕು. ಕಬ್ಬಿನ ಉಪ ಉತ್ಪನ್ನವಾದ ಈಟೀನಾಲ್ ಇಂದನವನ್ನಾಗಿ ಬಳಸಲು ಅನುಮತಿ ಕೊಡಬೇಕು ಅಲ್ಲದೇ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸರಕಾರದ ವಿರುದ್ಧ ರೈಲ ರೋಖೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸದರಿ ಪ್ರತಿಭಟನೆಯ ನೇತೃತ್ವವನ್ನು ಕೊಪ್ಪಳ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಸಂಗಣ್ಣ ಕರಡಿ ನೇತೃತ್ವ ವಹಿಸುವರು. ಪ್ರತಿಭಟನೆಯಲ್ಲಿ ಶಾಸಕರಾದ ಹಾಲಪ್ಪ ಆಚಾರ, ದೊಡ್ಡನಗೌಡ ಪಾಟೀಲ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಸುಕಾಲಪೇಟೆ, ಹೆಚ್.ಆರ್.ಚನ್ನಕೇಶವ, ಕೊಲ್ಲಾ ಶೇಷಗಿರಿರಾವ್, ಬಸವರಾಜ ದಡೇಸುಗೂರು, ಮಾಜಿ ಶಾಸಕ ಪರಣ್ಣ ಮನುವಳ್ಳಿ, ಗಿರಿಗೌಡ ವಕೀಲರು, ತಿಪ್ಪೆರುದ್ರಸ್ವಾಮಿ, ನಾರಾಯಣಪ್ಪ, ನರಸಿಂಗ್‌ರಾವ್ ಕುಲಕರ್ಣಿ, ರಾಜು ಬಾಕಳೆ, ಚಂದ್ರಶೇಖರ ಕವಲೂರು, ಕೋಟ್ರೇಶ ಶೆಡ್ಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ, ಅಪ್ಪಣ್ಣ ಪದಕಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ರೈತ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಯುವ ಘಟಕ, ವಿವಿಧ ಮಂಡಲಗಳ ಅಧ್ಯಕ್ಷರುಗಳು ಪದಾಧಿಕಾರಿಗಳು, ನಗರಸಭಾ ಸದಸ್ಯರು ಕಾರ್ಯಕರ್ತರು, ಅಭಿಮಾನಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಭಾರತೀಯ ಜನತಾ ಪಕ್ಷವು ಮನವಿ ಮಾಡಿಕೊಂಡಿದೆ ಎಂದು ಮಾಧ್ಯಮದ ಸಹ ವಕ್ತಾರ ಪರಮಾನಂದ ಯಾಳಗಿ  ತಿಳಿಸಿದ್ದಾರೆ.

About admin

Leave a Reply

Scroll To Top