ಜನರ ಸಮಸ್ಯಗಳಿಗೆ ಸ್ಪಂದಿಸುವೆನು-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

 ಕ್ಷೇತ್ರದ ಮುನಿರಾಬಾದ ಆರ್.ಎಸ್.ಅಲ್ಲಾನಗರ, ಹಿರೇಬಗನಾಳ, ಚಿಕ್ಕಬಗನಾಳ, ಕರ್ಕಿಹಳ್ಳಿ, ಗ್ರಾಮಗಳಲ್ಲಿ ಜನಸಂಪರ್ಕ ಸಭೆಯಲ್ಲಿ ಜನರ ಅಹವಾಲುಗಳನ್ನು ಸ್ವಿಕರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಕ್ಷೇತ್ರದ ಎಲ್ಲಾ ಬಡಜನರ ಸಮಸ್ಯಗಳಿಗೆ ಸ್ಪಂದಿಸಿ ಅವರ ದೈನಂದಿಕ ಜೀವನಕ್ಕೆ ಮೂಲಬೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನಮಾಡುವೇನು. ಬಡ ಜನರ ಆರೋಗ್ಯ ಶಿಕ್ಷಣ, ಉದ್ಯೋಗ ಕಲ್ಪಿಸಲು ಸರ್ಕಾರದ ಅನೇಕ ಯೋಜನೆಗಳನ್ನು ನಿಮ್ಮ ಬಾಗಲಿಗೆ ತರುವೆನು ಸಮಾಜದ ಎಲ್ಲಾ ವರ್ಗದ ಜನತೆಗೆ ವಿವಿಧ ನಿಗಮಗಳಿಂದ ಹೆಚ್ಚಿನ ಸಾಲ ಸೌಲಭ್ಯ ಒದಗಿಸಿ ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಹೆಚ್ಚಿಸಿ ನಿಮ್ಮ ಎಲ್ಲರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹಗಲಿರುಳು ಶ್ರಮಿಸುವೆನು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಟಿ.ಜನಾರ್ಧನ ಹುಲಗಿ, ಕೆ,.ರಮೇಶಪ್ಪ ಹಿಟ್ನಾಳ, ಕೆ.ಎಮ್ ಸಯ್ಯದ್ ಸಾಬ್, ಜಡಿಯಪ್ಪ ಬಂಗಾಳಿ, ಜಗದೀಶ ಕರ್ಕಿಹಳ್ಳಿ,ಸೋಮಣ್ಣ ಬಾರಕೆರ, ಹೇಮಣ್ಣ ದೇವರಮನಿ, ಬಸಣ್ಣ ಬಂಗಾಳಿ, ಮರ್ದಾನಪ್ಪ ಬಿಸರಳ್ಳಿ, ಕುಮಾರ ಮಜ್ಜಗಿ, ಯಮನೂರಪ್ಪ ಅಲ್ಲಾನಗರ, ಇನ್ನೂ ಅನೇಕ ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.

Leave a Reply