ವಿಕಲಚೇನ ಮಕ್ಕಳ ಸೇವೆ ದೇವರ ಸೇವೆಗೆ ಸಮಾನವಾದ್ದದು ಬಾಳಪ್ಪ ಬಾರಕೇರ.

ಕೊಪ್ಪಳ- ವಿಕಲಚೇತನ ಮಕ್ಕಳ ಸೇವೆಯನ್ನು ಮಾಡುವುದು ದೇವರಿಗೆ ಸಮಾನವಾದದ್ದು ಎಂದು ನಗರಸಭೆಯ ಉಪಾಧ್ಯಕ್ಷರಾದ ಬಾಳಪ್ಪ ಬಾರಕೇರ ಹೇಳಿದರು.ನಗರದ ಸ್ಟೇಷನ ಎದುರುಗಡೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮನ್ವಯ ಶಿಕ್ಷಣ ಶಿರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡಿದ್ದ ೨೦೧೫-೧೬ ನೇ ಸಾಲಿನ ವಿಶೇಷ ಅಗತ್ಯಯುಳ್ಳ ಮಕ್ಕಳ ವೈದ್ಯಕೀಯ ತಪಾಸಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡುತ್ತ,ವಿಕಲಚೇತನ ಮಕ್ಕಳು ದೇವರಿಗೆ ಸರಿಸಮಾನವಾದವರು ಅಂತಹವರ ಸೇವೆಯನ್ನು ಮಾಡುವುದರಿಂದ ದೇವರ ಸೇವೆ ಮಾಡಿದ್ದಂತಾಗುತ್ತದೆ.ವಿಕಲಚೇನರನ್ನು ಸಮಾಜದ ಪ್ರತಿಯೊಬ್ಬರು ಅವರ ಬಗ್ಗೆ ಅನುಕಂಪವನ್ನು ವ್ಯಕ್ತಪಡಿಸದೆ ಅವಕಾಶವನ್ನು ಒದಗಿಸುವ ಕಾರ್ಯ ಮಾಡಬೇಕು.ನಗರಸಭೆಯಿಂದ ವಿವಿಧ ಅನುದಾನದಲ್ಲಿ ಅಂಗವಿಕಲರಿಗೆ ಸೌಲಭ್ಯಗಳನ್ನು ನೀಡಲಾಗಿದೆ.ಅಲ್ಲದೆ ನಗರದ ಪ್ರದೇಶದಲ್ಲಿ ವಾಸವಾಗಿರುವ ಅಂಗವಿಕಲ ಮಕ್ಕಳಿಗೆ ಶೀಘ್ರವೇ ಶೌಚಾಲಯದ ವ್ಯವಸ್ಥೆಯನ್ನು ಶೀಘ್ರವೇ ಮಾಡಲಾಗುವುದು ಎಂದು ಭರವಸೆ ನೀಡಿದರು.ಮುಖ್ಯ ಅಥಿತಿಗಳಾಗಿ ಅಗಮಿಸಿದ್ದ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತ,ಅಂಗವಿಕಲಯನ್ನು ಒಂದು ಶಾಪವಾಗಿ ಪರಿಗಣಿಸದೆ ಅದನ್ನು ವರವಾಗಿ ಸ್ವೀಕರಿಸಬೇಕು.ಅಂತಹ  ಮಕ್ಕಳ ತಂದೆ-ತಾಯಿಗಳು ಹಾಗೂ ಪೋಷಕರು ಅಂಗವಿಕಲ ಮಕ್ಕಳು ನಮಗೆ ಭಾರ ಎಂದು ಪರಿಗಣಿಸಬಾರದು,ಅಂತಹ ಮಕ್ಕಳಿಗೆ ಆತ್ಮ ಸ್ಥೈರ್ಯ

ತುಂಬುವುದರ ಜೊತೆಯಲ್ಲಿ ಪ್ರಾರಂಭದಲ್ಲಿ ಉತ್ತಮ ರೀತಿಯ ಶಿಕ್ಷಣವನ್ನು ನೀಡಿದರೇ ಅವರು ಕೂಡಾ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ಸಾಗಿಸಬಹುದು.ಅಂಗವಿಕಲತೆಯುಳ್ಳ ಹಲವರು ಅನೇಕ ಕ್ಷೇತ್ರದಲ್ಲಿ ತಮ್ಮದೇಯಾದ ಕೊಡುಗೆಯನ್ನು ನೀಡಿದ್ದಾರೆ.ಇತ್ತೀಚೆಗೆ ಜರುಗಿದ ಯು.ಪಿ.ಎಸ್ಸಿ.ನಾಗರಿಕ ಸೇವಾ ಪರಿಕ್ಷೇಯಲ್ಲಿ ಅಂಗವಿಕಲತೆ ಇದ್ದರು ಕೂಡಾ ಇರಾ ಸಿಂಘಲ್ ದೇಶಕ್ಕೆ ಪ್ರಥಮ ಸ್ಥಾನವನ್ನು ಪಡೆದಿರುವುದು  ನಮ್ಮೇಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ.ಸಮನ್ವಯ ಶಿಕ್ಷಣದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಹೆಚ್ಚಿನ ರೀತಿಯಲ್ಲಿ ಅಂಗವಿಕಲ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶ್ರಮಿಸಬೇಕು ಎಂದು ಹೇಳಿದರು.ನಗರಸಭೆಯ ಅಧ್ಯಕ್ಷರಾದ ಬಸಮ್ಮ ರಾಮಣ್ಣ ಹಳ್ಳಿಗುಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ಮಾತನಾಡಿ,ವಿಕಲಚೇನ ಮಕ್ಕಳಿಗೆ ಇಲಾಖೆಯ ವತಿಯಿಂದ ಅನೇಕ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು,ಅದನ್ನು ಸರಿಯಾದ ರೀತಿಯಲ್ಲಿ ಪ್ರತಿಯೊಬ್ಬರು ಬಳಸಿಕೊಳ್ಳಬೇಕು.ಪಾಲಕರು ಕೂಡಾ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಸಮನ್ವಯ ಶಿಕ್ಷಣದ ಶಿಕ್ಷಕರಾದ ಬಲರಾಮ ಪೂಜಾರ ಮಾತನಾಡಿದರು.ಕಾರ್ಯಕ್ರಮದಲ್ಲಿ ಕ್ಷೇತ್ರಸಮನ್ವಯಾಧಿಕಾರಿಗಳಾದ ಶರಣಪ್ಪ ಗೌರಿಪುರ,ವಿಕಲಚೇನ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪೂಜಾರ,ಕಾರ್ಯದರ್ಶಿ ಶಿವಯೊಗೆಪ್ಪ  ಬಳ್ಳೋಳ್ಳಿ,ಮುಖ್ಯೋಪಾಧ್ಯಾಯರಾದ ಲಸ್ಗರನಾಯ್ಕ,ಇನ್ನರ್ ವ್ಹಿಲ್ ಕ್ಲಬ್‌ನ ಅಧ್ಯಕ್ಷರಾದ ಕಿಶೋರಿ ಬೂದನೂರ,ಕಾರ್ಯದರ್ಶಿ ಹೇಮಲತಾ ನಾಯಕ,ತ್ರಿಶಲಾ ಪಾಟೀಲ,ರತ್ನಾ ಪಾಟೀಲ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಬಿ.ಆರ್.ಪಿ.ಮಹಮ್ಮದ್‌ರಪಿ ನಿರೂಪಿಸಿದರು.

Please follow and like us:
error

Related posts

Leave a Comment