ವೈಭವದ ಹುಲಿಗೆಮ್ಮ ದೇವಿ ದಸರಾ ಮಹೋತ್ಸವಕ್ಕೆ ಸಚಿವ ಶಿವರಾಜ ತಂಗಡಗಿ ಚಾಲನೆ.

ಕೊಪ್ಪಳ, ಅ.೧೪ (ಕ ವಾ) ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ಬುಧವಾರದಂದು ಚಾಲನೆ ನೀಡಿದರು.
     ಹುಲಿಗೆಮ್ಮ ದೇವಿ ದೇವಸ್ಥಾನ ಆವರಣದಲ್ಲಿ ದಸರಾ ಮಹೋತ್ಸವ ಘಟಸ್ಥಾಪನೆಯ ಉದ್ಘಾಟನೆ ನೆರವೇರಿಸಿ, ನಂತರ ಮಾತನಾಡಿದ ಸಚಿವ ಶಿವರಾಜ ಎಸ್ ತಂಗಡಗಿ ಅವರು, ಹುಲಿಗೆಮ್ಮ ದೇವಿ ದಸರಾ ಮಹೋತ್ಸವಕ್ಕೆ ನಾಡ ಹಬ್ಬ ಮೈಸೂರು ದಸರಾ ಉತ್ಸವದಷ್ಟೇ ಮಹತ್ವವಿದೆ.  ಮೈಸೂರು ದಸರಾ ಉತ್ಸವದಲ್ಲಿ ವಿಜೃಂಭಣೆ ಮೆರೆದರೆ, ಹುಲಿಗೆಮ್ಮ ದೇವಿ ದಸರಾ ಉತ್ಸವದಲ್ಲಿ ವೈಭವದ ಜೊತೆಗೆ ಭಕ್ತಿ-ಭಾವ ಮೇಳೈಸಲಿದೆ.  ಹುಲಿಗೆಮ್ಮ ದೇವಿ ಕ್ಷೇತ್ರಕ್ಕೆ ಭಕ್ತಾದಿಗಳು ಬರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಇಲ್ಲಿನ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದೆ.  ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಇಲ್ಲಿನ ಸಂಪರ್ಕ ರಸ್ತೆಯನ್ನು ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.  ೧೭ ಕೋಟಿ ರೂ. ವೆಚ್ಚದಲ್ಲಿ ಹುಲಿಗಿ ಅಭಿವೃದ್ಧಿಗೆ ಪ್ರಸ್ತಾವನೆ ತಯಾರಿಸಿ ಸಲ್ಲಿಸಲಾಗಿದೆ. ಒಳಚರಂಡಿ ವ್ಯವಸ್ಥೆ, ರಸ್ತೆ, ಶೌಚಾಲಯಗಳ ನಿರ್ಮಾಣ, ಭಕ್ತಾದಿಗಳಿಗೆ ತಂಗುದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನಯ ಕೈಗೆತ್ತಿಕೊಳ್ಳಲಾಗಿದೆ.  ದೇವಿ ದರ್ಶನಕ್ಕೆ ಮುನ್ನ ನದಿಯಲ್ಲಿ ಸ್ನಾನಕ್ಕೆ ತೆರಳಿದ ಸಂದರ್ಭದಲ್ಲಿ ಭಕ್ತಾದಿಗಳ ಬೆಲೆ ಬಾಳುವ ಒಡವೆ, ಇತ್ಯಾದಿ ವಸ್ತುಗಳನ್ನು ಕಳೆದುಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ದೇವಸ್ಥಾನ ಆವರಣದಲ್ಲಿ ಭಕ್ತಾದಿಗಳಿಗೆ ವಿಶೇಷ ಲಗೇಜ್ ಲಾಕರ್ ವ್ಯವಸ್ಥೆ ಕೈಗೊಳ್ಳಲಾಗಿದೆ.  ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.  ರಾಜ್ಯದಲ್ಲಿ ಈ ಬಾರಿ ಬರದ ಕಾರ್ಮೋಡ ಕವಿದಿದ್ದು, ರೈತ ಬಂಧುಗಳ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ, ಉತ್ತಮ ಮಳೆ-ಬೆಳೆ ಸಮೃದ್ಧಗೊಂಡು, ಬರದ ಆತಂಕವನ್ನು ನಿವಾರಿಸಲು ಹುಲಿಗೆಮ್ಮ ದೇವಿ ಕೃಪೆ ತೋರಲಿ ಎಂದು ಸಚಿವ ಶಿವರಾಜ ತಂಗಡಗಿ ಆಶಿಸಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಹುಲಿಗೆಮ್ಮ ದೇವಿ ದಸರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ಹೆಚ್ಚು, ಹೆಚ್ಚು ಜನರನ್ನು ಸೆಳೆಯುತ್ತಿದೆ.  ಹುಲಿಗಿಯ ಅಭಿವೃದ್ಧಿಗೆ ಈಗಾಗಲೆ ೨೭ ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.  ಹುಲಿಗಿಯ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿದ್ದು, ಭಕ್ತಾದಿಗಳ ಅನುಕೂಲ ಹಾಗೂ ಗ್ರಾಮಸ್ಥರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು, ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು.  ದುಷ್ಟ ಸಂಹಾರ ಮಾಡುವ ಶಕ್ತಿ ದೇವತೆಯನ್ನು ಆರಾಧಿಸುವ ದಸರಾ ದಿನಗಳಲ್ಲಿ ಆತ್ಮದೊಳಗಿನ ದುಷ್ಟ ಶಕ್ತಿಗಳನ್ನು ತೊಡೆದುಹಾಕುವಂತಹ ಶಕ್ತಿಯನ್ನು ದೇವಿ ಎಲ್ಲರಿಗೂ ದಯಪಾಲಿಸಲಿ ಎಂದು ಬೇಡಿಕೊಂಡರು.
     ಸಂಸದ ಸಂಗಣ್ಣ ಕರಡಿ ಅವರು ಮಾತನಾಡಿ, ಉತ್ಸವಗಳು
     ಪ್ರಾಸ್ತಾವಿಕ ಮಾತನಾಡಿದ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು, ಹುಲಿಗಿಯ ಅಭಿವೃದ್ಧಿಗೆ ೨೦೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮಹಾನಕ್ಷೆ ತಯಾರಿಸಿ, ಅನುಷ್ಠಾನಕ್ಕಾಗಿ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ.  ಕಳೆದ ಏಪ್ರಿಲ್‌ನಿಂದ ಉಚಿತ ನಿತ್ಯ ಅನ್ನದಾಸೋಹ ಪ್ರಾರಂಭಿಸಲಾಗಿದೆ ಎಂದರು.  ಜಿಲ್ಲಾ ಪಂಚಾಯತಿ ಸದಸ್ಯ ಜನಾರ್ಧನ ಹುಲಿಗಿ ಕಾರ್ಯಕ್ರಮ ಕುರಿತು ಮಾತನಾಡಿದರು.  ಪ್ರಭಾರಿ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ, ಹುಲಿಗಿ ಗ್ರಾ.ಪಂ. ಅಧ್ಯಕ್ಷೆ ರೇಣುಕಾ ರಾಮಣ್ಣ, ಗಣ್ಯರಾದ ರಮೇಶ್ ವೈದ್ಯ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ದೇಶದ ಭವ್ಯ ಪರಂಪರೆ ಹಾಗೂ ಹಿರಿಮೆಯನ್ನು ಮೆಲಕು ಹಾಕುವ ವೇದಿಕೆಗಳಾಗಬೇಕು.  ಹುಲಿಗಿ ಧಾರ್ಮಿಕ ಕ್ಷೇತ್ರಕ್ಕೆ ಭಕ್ತಾದಿಗಳು ಬರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂಲಭೂತ ಸೌಕರ್ಯ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

Please follow and like us:
error