ಅಗಳಕೇರಾದ ಮಹಿಳೆ ಕಾಣೆ ಪತ್ತೆಗೆ ಸಹಕರಿಸಲು ಸೂಚನೆ.

ಕೊಪ್ಪಳ, ಜು. ೦೧ ಕೊಪ್ಪಳ ಜಿಲ್ಲೆಯ ಅಗಳಕೇರಾ ಗ್ರಾಮದ ರೇಣುಕಾ ರಮೇಶ ಚಿಲಕಮುಕಿ (೩೫) ಎಂಬ ಮಹಿಳೆ ಕಳೆದ ಮೇ. ೧೧ ರಿಂದ ಕಾಣೆಯಾಗಿದ್ದು,  ಮಹಿಳೆಯ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಅಗಳಕೇರಾ ಗ್ರಾಮದ ನಿವಾಸಿಯಾದ ರೇಣುಕಾ ರಮೇಶ ಚಿಲಕಮುಕಿ (೩೫) ಎಂಬ ಮಹಿಳೆ  ಕಳೆದ ಮೇ.೧೧ ರಂದು ಬೆಳಿಗ್ಗೆ ೧೦ ಗಂಟೆಗೆ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ  ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ನಂತರ ಮಲ್ಲಾಪುರ ಗ್ರಾಮಕ್ಕೂ ಹೋಗದೇ ವಾಪಸ್ ಮನೆಗೂ ಬಾರದೇ ಕಾಣೆಯಾಗಿದ್ದಾಳೆ.  ಕಾಣೆಯಾದ ಮಹಿಳೆಯ ವಿವರ ಇಂತಿದೆ.  ರೇಣುಕಾ ರಮೇಶ ಚಿಲಕಮುಕಿ, ವಯಸ್ಸು: ೩೫, ಸಾ|| ಅಗಳಕೇರಾ, ತಾ|| ಕೊಪ್ಪಳ, ಜಿ||ಕೊಪ್ಪಳ, ಜಾತಿ: ಕುರುಬರು, ಎತ್ತರ : ಸುಮಾರು ೫ ಅಡಿ, ಕನ್ನಡ ಭಾಷೆ ಮಾತನಾಡುತ್ತಾಳೆ, ಸದೃಢ ಮೈಕಟ್ಟು, ಕೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕಾಣೆಯಾದ ದಿನ ಆಕಾಶ ನೀಲಿ ಸೀರೆ, ಚಾಕಲೇಟ ಕಲರ್ ಬ್ಲೌಸ್ ಧರಿಸಿರುತ್ತಾಳೆ. ಈ   ಚಹರೆಯುಳ್ಳ ಮಹಿಳೆಯು ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಅಥವಾ ಮಹಿಳೆಯ ಬಗ್ಗೆ ಮಾಹಿತಿ ದೊರಕಿದಲ್ಲಿ ಮುನಿರಾಬಾದ್ ಪೊಲೀಸ್ ಠಾಣೆ ಪಿಎಸ್‌ಐ ದೂರವಾಣಿ ಸಂಖ್ಯೆ:೦೮೫೩೯-೨೭೦೩೩೩, ಡಿ.ಎಸ್.ಪಿ ಕೊಪ್ಪಳ-೦೮೫೩೯-೨೨೨೪೩೩, ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ-೦೮೫೩೯-೨೨೧೩೩೩, ಎಸ್.ಪಿ. ಕೊಪ್ಪಳ-೦೮೫೩೯-೨೩೦೧೧೧ ನ್ನು ಸಂಪರ್ಕಿಸುವಂತೆ ತಿಳಿಸಿದೆ.

Leave a Reply