ಕುಷ್ಟಗಿ ಅಂಗನವಾಡಿ ಸಹಾಯಕಿ ನೇಮಕ ಆದೇಶ ರದ್ದು.

ಕೊಪ್ಪಳ,
ಆ.೦೭ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ೧೪ನೇ ವಾರ್ಡ್
ಅಂಬೇಡ್ಕರ್ ನಗರ ಕೇಂದ್ರ-೫ರ ಅಂಗನವಾಡಿ ಸಹಾಯಕಿ ವಿಜಯಲಕ್ಷ್ಮಿ ಯಮನೂರಪ್ಪ ಮೋಚಿ ಇವರ
ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯತೆ ಆದೇಶವನ್ನು ರದ್ದುಪಡಿಸಿ ಕೊಪ್ಪಳ ಜಿಲ್ಲಾ ಮಹಿಳಾ
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಆದೇಶ ಹೊರಡಿಸಿದ್ದಾರೆ.
    
ಕುಷ್ಟಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಖಾಲಿ ಇರುವ ಕುಷ್ಟಗಿ ಪಟ್ಟಣದ ೧೪ನೇ
ವಾರ್ಡಿನಲ್ಲಿರುವ ೫ ನೇ ಕೇಂದ್ರಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಿ ಸಲ್ಲಿಸಿದ ಅಂತಿಮ
ಆಯ್ಕೆ ಪಟ್ಟಿ ಪ್ರಸ್ತಾವನೆ ಅನ್ವಯ ೧೫ನೇ ವಾರ್ಡಿಗೆ, ಮಾನವೀಯತೆ ದೃಷ್ಟಿಯಿಂದ ಹಾಗೂ
ವಯೋಮಿತಿ ಮೀರುವ ಅಂಚಿನಲ್ಲಿರುವುದರಿಂದ ವಿಜಯಲಕ್ಷ್ಮಿ ಮೋಚಿ ಇವರನ್ನು ವಿಧವೆ ಆಧಾರದ
ಮೇಲೆ ಅಂಗನವಾಡಿ ಸಹಾಯಕಿಯಾಗಿ ನೇಮಿಸಿಕೊಳ್ಳಲಾಗಿತ್ತು. ಈ ಆಯ್ಕೆಗೆ ಭಾಗ್ಯಶ್ರೀ
ವಿಶ್ವನಾಥ ಚಲುವಾದಿ ಎಂಬುವವರು ತಕರಾರು ಸಲ್ಲಿಸಿದ್ದರು. ಅಲ್ಲದೇ, ಜು.೨೯ ರಂದು
ಕುಷ್ಟಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ,
ಆಯ್ಕೆಗೊಂಡಿರುವ ವಿಜಯಲಕ್ಷ್ಮಿ ೧೪ನೇ ವಾರ್ಡಿಗೆ ಸಂಬಂಧಪಟ್ಟಿಲ್ಲ ಎಂಬುದಾಗಿ
ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆಡಳಿತಾತ್ಮಕ
ಹಿತದೃಷ್ಟಿಯಿಂದ ಹಾಗೂ ನೇಮಕಾತಿ ಆದೇಶದ ನಿಯಮಗಳನ್ನು ಪಾಲಿಸುವ ಉದ್ದೇಶದಿಂದ ಅಂಗನವಾಡಿ
ಸಹಾಯಕಿ ವಿಜಯಲಕ್ಷ್ಮಿ ಯಮನೂರಪ್ಪ ಮೋಚಿ ಇವರ ಮಾನ್ಯತೆ ಆದೇಶವನ್ನು ತಕ್ಷಣದಿಂದ ಜಾರಿಗೆ
ಬರುವಂತೆ ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Please follow and like us:
error