fbpx

ಸಂಘಟಯಿಂದ ಮಾತ್ರ ಸೌಲಭ್ಯ ಪಡೆಯಬಹುದು ಪಟೇಲ ಪಾಂಡು.

ಕೊಪ್ಪಳ-09- ಯಾವುದೇ ಸೌಲಭ್ಯವನ್ನು,ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದರೆ ಅದು ಸಂಘಟನೆಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ಪಟೇಲ ಪಾಂಡು ಹೇಳಿದರು.
   ರವಿವಾರ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ನೂತನ ಪಿಂಚಣಿ ಯೋಜನೆಗೆ ಒಳಪಡುವ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತ,ಸರ್ಕಾರದಿಂದ ಯಾವುದೇ ಒಂದು ಸೌಲಭ್ಯವನ್ನು ಪಡೆಯಬೇಕಾದರೆ ಒಬ್ಬ ವ್ಯಕ್ತಿಯಿಂದ ವಿಳಂಬವಾಗುತ್ತದೆ.ಆದರೆ ಸಂಘಟನೆಯ ಮುಖೇನ ಹೋದರೆ ಸೌಲಭ್ಯಗಳನ್ನು,ಸಮಸ್ಯೆಗಳನ್ನು ಶೀಘ್ರವೇ ಬಗೆ  ಹರಿಸಿಕೊಳ್ಳಬಹುದು.ಸರ್ಕಾರವು ೨೦೦೬ ಆಗಸ್ಟ ೧ ರ ನಂತರ ನೇಮಕವಾದ ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೆ ಮಾಡಿರುವ ನೂತನ ಪಿಂಚಣಿ ಯೋಜನೆಯು ಹಲವಾರು ರೀತಿಯ ಗೊಂದಲಗಳನ್ನು ಒಳಗೊಂಡಿದ್ದು,ನೌಕರರನ್ನು ಆಂತಕಕ್ಕೆ ಇಡುಮಾಡಿದೆ.೨೦೦೬ ರಿಂದ ಇಲ್ಲಿಯವರೆಗೆ ನೌಕರರಿಂದ ಕಟಾವಣೆಗೊಂಡ ಹಣ ಯಾವ ಖಾತೆಯಲ್ಲಿದೆ ಎಂಬುದರ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲದಿರುವುದು ಆಂತಕಕಾರಿ ಸಂಗತಿಯಾಗಿದೆ.ನಾವು ಮಾಡಿದ ಸೇವೆಯನ್ನು ಪರಿಗಣಿಸಿ ಸರ್ಕಾರವು ನಿವೃತ್ತಿ ಅಂಚಿನಲ್ಲಿ ನೀಡಲಾಗುವ ಪಿಂಚಣಿ ಹಣವು ಬಹಳಷ್ಟು ಗೊಂದಲದಿಂದ ಕೂಡಿದ್ದು,ಎನ್.ಪಿ.ಎಸ್.ಹೋರಾಟಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಪೂರ್ಣವಾದ ಬೆಂಬಲ,ಸಹಕಾರ ನೀಡುವುದಾಗಿ ಭರವಸೆ ನೀಡಿದರು.
 ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿಗಳಾದ ಚಂದ್ರು ನೂಗ್ಲಿ ಮಾತನಾಡಿ,ಎನ್.ಪಿ.ಎಸ್.ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಮ್ಮ ಸಂಘದಿಂದ ಸಂಸತ್ತ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ  ಈಗಾಗಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗಿದೆ.ಡಿ.೧೯,೨೦ ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಶಿಕ್ಷಕರ ಸಮ್ಮೇಳನಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಪತ್ರ ನೀಡುವುದಲ್ಲದೇ ಯೋಜನೆಯ ಕುರಿತಾಗಿ ಮಾತನಾಡಲಾಗುದು ಅಲ್ಲದೇ ರಾಜ್ಯದಲ್ಲಿರುವ ಸುಮಾರು ೮೦ ಸಾವಿರ ಎನ್.ಪಿ.ಎಸ್.ನೌಕರರ ಒಂದು ಕಡೆಯಲ್ಲಿ ಸೇರಿ ಒತ್ತಡ ಹಾಕಬೇಕು ಎಂದು ಹೇಳಿದರು.
  ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ್ ಮಾತನಾಡುತ್ತ,ಕೊಪ್ಪಳ ಜಿಲ್ಲೆಯು ಹಲವಾರು ವಿಶೇಷತೆಯನ್ನು ಒಳಗೊಂಡಿರುವ ಜಿಲ್ಲೆಯಾಗಿದೆ.ಎನ್.ಪಿ.ಎಸ್.ನೌಕರರ ರಾಜ್ಯ ಸಂಘದ ಉದ್ಘಾಟನೆಯು  ಜರುಗುತ್ತಿರುವುದು ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಿದೆ.ಈಗಾಗಲೇ ನಮ್ಮ ಸಂಘದ ವತಿಯಿಂದ ಜಿಲ್ಲೆಯ ಎಲ್ಲಾ ಎನ್.ಪಿ.ಎಸ್.ನೌಕರರಿಗೆ ಯೋಜನೆಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದರ ಮೂಲಕ ನೌಕರರಿಗೆ ಮಾಹಿತಿ ನೀಡಲಾಗಿದೆ.ಎನ್.ಪಿ.ಎಸ್.ವಿಷಯದ ಕುರಿತು ರಾಜ್ಯ ಮಟ್ಟದ ಸಭೆಯಲ್ಲಿ ಚರ್ಚಿಸುದಾಗಿ ಭರವಸೆ ನೀಡಿದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎನ್.ಪಿ.ಎಸ್.ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತ,ಎನ್.ಪಿ.ಎಸ್.ಯೋಜನೆಯು ಜಾರಿಗೊಳಿಸಿ ೯ ವರ್ಷಗಳು ಕಳೆದರು ಕೂಡಾ ಸರ್ಕಾರವು ಈ ಯೋಜನೆಯ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ನೀಡದಿರುವುದು ದುರಾದ್ರುಷ್ಟಕರ ಸಂಗತಿಯಾಗಿದೆ.ಅನಿಶ್ಚಿತ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು ಕೂಡಲೇ ರದ್ದುಗೊಳಿಸಬೇಕು ಹಾ
ಪ್ರಾಸ್ತಾವಿಕವಾಗಿ ಎನ್.ಪಿ.ಎಸ್.ಜಿಲ್ಲಾಧ್ಯಕ್ಷರಾದ ಬಾಳಪ್ಪ ಕಾಳೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ತಿನ ಸದಸ್ಯರಾದ ಧನಂಜಯ್ಯಾ ಮಾಲಗಿತ್ತಿ,ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ,ಎನ್.ಪಿ.ಎಸ್.ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ರಾಜು ಶೆಲವಡಿ,ಪ್ರಧಾನ ಕಾರ್ಯದರ್ಶಿ ಬಸವರಾಜ ಕಮಲಾಪುರ,ಯಲಬುರ್ಗಾ ತಾಲೂಕ ಅಧ್ಯಕ್ಷರಾದ ವೈ.ಜಿ.ಪಾಟೀಲ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ರಾಜ್ಯ ಸಂಘದ ನಿರ್ದೇಶಕರಾದ ಚಂದ್ರು ಹೆಳವರ ನಿರೂಪಿಸಿದರು.
ಪ್ರಾರ್ಥನೆಯನ್ನು ಶಿಕ್ಷಕರಾದ ಹನುಮಂತ ಹಳ್ಳಿ ನಿರ್ವಹಿಸಿದರು.
ತಾಲೂಕ ಎನ್.ಪಿ.ಎಸ್.ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ದೇವಪ್ಪ ಒಂಟಿಗಾರ ಸ್ವಾಗತಿಸಿದರು. ಯಲಬುರ್ಗಾ ತಾಲೂಕ ಅಧ್ಯಕ್ಷರಾದ ಎಸ್.ಡಿ.ಶ್ಯಾಗೋಟಿ ಎಲ್ಲರಿಗೂ ವಂದಿಸಿದರು.
ಪೋಟೊ:ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಎನ್.ಪಿ.ಎಸ್.ಸರ್ಕಾರಿ ನೌಕರರ ರಾಜ್ಯ ಸಂಘವನ್ನು ಉದ್ಘಾಟಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ಪಟೇಲ ಪಾಂಡು ಮಾತನಾಡಿದರು.

ಗೂ ರಾಜ್ಯ ಸರ್ಕಾರವು ಕೂಡಾ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಡ ಹೇರಬೇಕು.ಡಿಸೇಂಬರ್‌ನಲ್ಲಿ ಎನ್.ಪಿ.ಎಸ್.ಯೋಜನೆಯ ಕುರಿತಾಗಿ ಸಮಗ್ರ ಮಾಹಿತಿಯನ್ನು ನೀಡಲು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

Please follow and like us:
error

Leave a Reply

error: Content is protected !!