ಭಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ.

ಕೊಪ್ಪಳ-21- ಇತ್ತೀಚಿಗೆ ತಾಲೂಕಿನ ಮೋರನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಕಾಳಿದಾಸ ಯುವಕ ಸಂಘ ಹಾಗೂ ಶ್ರೀ ಮಾರುತೇಶ್ವರ ಭಜನಾ ಮಂಡಳಿ ಮೋರನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಭಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
    ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಯಲಪ್ಪ ದಳಪತಿ ವಹಿಸಿಕೊಂಡಿದ್ದರು. ವೀರುಪಾಕ್ಷಯ್ಯ ಗುರುವಿನ್ ಉದ್ಘಾಟನೆಯನ್ನು ನೆರವೆರಿಸಿದರು ವೇದಿಕೆಯಲ್ಲಿ ಮರಿಯಪ್ಪ ತಿಗರಿ ಚಂದ್ರಶೇಖರಯ್ಯ ಗುರುವಿನ್, ದ್ಯಾಮಣ್ಣ ನೀರಲಗಿ, ಹನುಮಪ್ಪ ಹಾರ್ನಳ್ಳಿ, ಹನುಮಪ್ಪ ಬಗನಾಳ, ಜಗದೀಶಪ್ಪ ಭಾವಿ, ವೀರುಪಾಕ್ಷಪ್ಪ ತಳಕಲ್, ಅಂದಪ್ಪ ಹೊರಪೇಟಿ, ಉಪಸ್ಥಿತರಿದ್ದರು.
ಕಾಳಿದಾಸ ಯುವಕ ಸಂಘದ ಅಧ್ಯಕ್ಷರಾದ ಅಂದಪ್ಪ ಚಿಲಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಹನುಂತಪ್ಪ ಸಾವುಕಾರ ಸ್ವಾಗತಿಸಿದರು, ಶಿವಕುಮಾರ ಬನ್ನಿಮರದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

Leave a Comment