ಸಿಪಿಐಎಂಎಲ್ ರಾಜ್ಯಕಾರ್ಯದರ್ಶಿ ಭಾರಧ್ವಾಜ್‌ರವರಿಗೆ ಮನುವಾದಿಗಳ ಕಾಟ ಖಂಡನೆ.

ಸಿಪಿಐಎಂಎಲ್ ರಾಜ್ಯಕಾರ್ಯದರ್ಶಿ ಭಾರಧ್ವಾಜ್‌ರಿಗೆ ನರೇಂದ್ರ ಎಮ್, #೨, ೨ನೇ ತಿರುವು, ಎಸ್.ಸಿ.ರೋಡ್, ಕಪಿಲಾ ಚಿತ್ರಮಂದಿರ, ಬೆಂಗಳೂರಿನ ವಿಳಾಸದಿಂದ ಏಕ್ ಭಾರತ-ಶ್ರೇಷ್ಠ ಭಾರತ ಮೋದಿ ಭಾವಚಿತ್ರವುಳ್ಳ ಮತ್ತು ಬಿಜೆಪಿ ಪಕ್ಷದ ಚಿಹ್ನೆ ಇರುವ ಟೀ-ಶರ್ಟ್ ಕಳಿಸಿರುವುದು ಬಿಜೆಪಿಯ ಕೆಟ್ಟ ಸಂಸ್ಕೃತಿ ಮತ್ತು ಅಸಹಿಷ್ಠುತೆ ತೋರಿಸುತ್ತದೆ. ಗಂಗಾವತಿಯಲ್ಲಿ ಭಯದ ವಾತಾವರಣ ಸೃಷ್ಠಿಸಿ ಶಾಂತಿಗೆ ಭಂಗತರುವ ಪ್ರಯತ್ನ ಮಾಡುತ್ತಿದ್ದಾರೆಂದು ಬಸವರಾಜ ಸುಳೇಕಲ್ ಖಂಡಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಹಿಂದುತ್ವದ ಅಸಹಿಷ್ಠುತೆ ಸಾಹಿತ್ಯವುಳ್ಳ ಪುಸ್ತಕಗಳನ್ನು ಭಾರಧ್ವಾಜ್‌ರಿಗೆ ಅಂಚೆ ಮುಖಾಂತರ ಕಳುಹಿಸಿದ್ದಾರೆ. ಮನುವಾದಿಗಳ ಮತ್ತು ಮೂಲಭೂತವಾದಿ ಈ ಕೃತ್ಯವನ್ನು ಪಕ್ಷದ ಜಿಲ್ಲಾ ಮುಂಚೂಣಿ ತಂಡದ ಸಮಾವೇಶದಲ್ಲಿ ಚರ್ಚಿಸಿ ಇವುಗಳನ್ನು ನಿರ್ಲಕ್ಷಿಸಬೇಕೆಂದು ತೀರ್ಮಾನ ತೆಗೆದುಕೊಂಡಿದ್ದೇವೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನೇರವಾಗಿ ಭಾರಧ್ವಜರಿಗೆ ಏಕ್‌ಭಾರತ್ – ಶ್ರೇಷ್ಠ ಭಾರತ ಹಾಗೂ ಮೋಧಿ ಭಾವಚಿತ್ರ ಇರುವ ಟೀ ಶರ್ಟ್‌ಗಳನ್ನು ಕಳುಹಿಸಿರುವುದನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ಗಂಗಾವತಿ ನಗರಠಾಣೆಗೆ ಗಮನಕ್ಕೆ ತಂದು ಟೀ ಶರ್ಟ್‌ನ್ನು ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ದಹನ ಮಾಡಲಾಗುವುದು ಎಂದು ಎಂ. ವಿರುಪಾಕ್ಷಪ್ಪ, ಎಂ. ಮಾಬುಸಾಬ್, ಎಂ. ಯೇಸಪ್ಪ, ಕನಕಪ್ಪ, ತಿಳಿಸಿದ್ದಾರೆ.

Please follow and like us:
error