ಸಾಯಿ ಬುಡೋಕಾನ್ ಕರಾಟೆ ಕ್ಲಬ್‌ನ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳು.

 ಕಾರಟಗಿಯಲ್ಲಿ ದಿನಾಂಕ ೮ ಹಾಗೂ ೯-೧೧-೨೦೧೪ ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳದ ಸಾಯಿ ಬುಡೋಕಾನ್ ಕರಾಟೆ ಕ್ಲಬ್‌ನ ಕ್ರೀಡಾ ಪಟುಗಳು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಮಹಿಳಾ ವಿಭಾಗದ ಯುದ್ಧ ನೃತ್ಯದಲ್ಲಿ ರುಕ್ಮಿಣಿ ಡಿ. ಬಂಗಾಳಿಗಿಡ ಪ್ರಥಮ ಸ್ಥಾನ, ಶೃತಿ ಎಮ್.ಕೊಂಡನಹಳ್ಳಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 
         

ಮಹಿಳಾ ವಿಭಾಗದ ಫೈಟ್ (ಸ್ಪೈರಿಂಗ್) ೩೦ ರಿಂದ ೩೫ ಕೆ.ಜಿ ವಿಭಾಗದಲ್ಲಿ ಸ್ವಾತಿ ಪರಶುರಾಮ ವಾಲಿಕಾರ ದ್ವಿತೀಯ ಸ್ಥಾನ, ೪೦ ರಿಂದ ೪೫ ಕೆ.ಜಿ ವಿಭಾಗದಲ್ಲಿ ಶೃತಿ ಎಮ್.ಕೊಂಡನಹಳ್ಳಿ ಪ್ರಥಮಸ್ಥಾನ, ೫೦ ರಿಂದ ೫೫ ಕೆ.ಜಿ ವಿಭಾಗದಲ್ಲಿ ರುಕ್ಮೀಣಿ ಡಿ.ಬಂಗಾಳಿಗಿಡ ಪ್ರಥಮ ಸ್ಥಾನ ಪಡೆದಿದ್ದಾರೆ. ಪುರುಷರ ೪೦ ರಿಂದ ೪೫ ಕೆ.ಜಿ ವಿಭಾಗದಲ್ಲಿ ಚಂದ್ರಶೇಖರ ಪೂಜಾರಿ ದದೇಗಲ್ಲ ತೃತೀಯ ಸ್ಥಾನ, ೫೫ ರಿಂದ ೬೦ ಕೆ.ಜಿ ವಿಭಾಗದಲ್ಲಿ ಮುತ್ತುರಾಜ ಬಂಡಿ ದದೇಗಲ್ಲ ಪ್ರಥಮ ಸ್ಥಾನ ಪಡೆದಿದ್ದಾರೆ. ಬ್ಲಾಕ್ ಬೆಲ್ಟ ೪೦ ರಿಂದ ೪೫ ಕೆ.ಜಿ ವಿಭಾಗದಲ್ಲಿ ಅಭಿಷೇಕ ಆರ್.ಡಿ ಭಾಗ್ಯನಗರ ದ್ವಿತೀಯ ಸ್ಥಾನ, ೬೦ ರಿಂದ ೭೦ ಕೆ.ಜಿ ವಿಭಾಗದಲ್ಲಿ ಚಿರಂಜೀವಿ ಎಮ್.ಗಿಣಿಗೇರಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರಯತ್ನ್ತ ತೊರಿದ ಕ್ರೀಡಾಪಟುಗಳಾದ ಸಂಜನ ಪರಶುರಾಮ ವಾಲೆಕಾರ, ಮಂಜುಳಾ.ವೈ ಮುಂಡರಗಿ, ಕೃಷ್ಣ ಭಜಂತ್ರಿ, ಯಮನೂರ ನಾಯಕ್, ಮಂಜುನಾಥ ಬಡೆಯಪ್ಪರು, ಅಭಿಷೇಕ್ ಗೊಂಡಬಾಳ, ಏಜಾಜ್ ಸಮಾಧಾನಕರ ಬಹುಮಾನ ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಎಲ್ಲಾ ಕ್ರೀಡಾ ಪಟುಗಳಿಗೆ ಸಾಯಿ ಬುಡೋಕಾನ್ ಕರಾಟೆ ಕ್ಲಬ್‌ನ ಮುಖ್ಯ ಶಿಕ್ಷಕರಾದ ಶ್ರೀಕಾಂತ ಪಿ.ಕಲಾಲ ಹಾಗೂ ಫಯಾಜ್ ಪಾಷಾ ಯತ್ನಟ್ಟಿ ಅಭಿನಂದಿಸಿದ್ದಾರೆ. 

Leave a Reply