ಉದ್ಭವ ಠಾಕ್ರಗೆ ಅನುಮತಿ ನೀಡಿರುವದಕ್ಕೆ ಖಂಡನೆ

ಮರಾಠಿ ನಾಟ್ಯ ಸಮ್ಮೇಳನದ ವೇದಿಕೆಗೆ ಶಿವಸೇನೆಯ ಮುಖ್ಯಸ್ಥ ಉದ್ಭವ ಠಾಕ್ರಗೆ ಅನುಮತಿ ನೀಡದಿರುವದಕ್ಕೆ ಖಂಡನೆ
ಕನ್ನಡದ ಗಂಡು ಮೆಟ್ಟಿದ ನಾಡು ಬೆಳಗಾವಿಯ ಸಿ.ಪಿ.ಎಡ್ಡ್ ಮೈದಾನದಲ್ಲಿ ಇದೇ ಫೆಬ್ರವರಿ ೭ ಮತ್ತು ೮ ರಂದು ನಡೆಯಲ್ಲಿರುವ ಅಖಿಲ ಭಾರತ ೯೫ನೇ ಮರಾಠಿ ನಾಟ್ಯ ಸಮ್ಮೇಳನದ ಸಮಾರೋಪ  ಸಮಾರಂಭಕ್ಕೆ ನಾಡದ್ರೋಹಿ ಶಿವಸೇನೆಯ ಮುಖ್ಯಸ್ಥ ಉದ್ಬವ ಠಾಕ್ರೆಯನ್ನು ಆಯೋಜಕರು ಆಹ್ವಾನಿಸಿರುವುದನ್ನು ಕರ್ನಾಟಕ ನವನಿರ್ಮಾಣ ಸೇನೆ ಬಲವಾಗಿ ಖಂಡಿಸಿ ಗೃಹ ಸಚಿವರಾದ ಕೆ, ಜೆ, ಜಾರ್ಜ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. 
ಸಮ್ಮೇಳನ ಕಲೆ ಮತ್ತು ಸಂಸ್ಕೃತಿ ನಾಟಕಕ್ಕೆ ಸೀಮಿತವಾಗಿರದೇ ಭಾಷಾ ದ್ವೇಷದ ಕಿಡಿ ಹಚ್ಚುವ ಸಲುವಾಗಿಯೆ ಆಯೋಜನೆ ಮಾಡಿದಂತೆ ಮಹಾಜನ ವರದಿಯಂತೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಆದರೂ ಪದೇ ಪದೇ ಬೇಳಗಾವಿಯ ವಿಚಾರದಲ್ಲಿ ಮಹಾರಾಷ್ಟ್ರ ಮೂಲದ ರಾಜಕಾರಣಿಗಳು ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಂಡು ಈ ಭಾಗದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಕಲೆ ಮತ್ತು ಸಂಸ್ಕೃತಿ ವಾತವರಣ ನಿರ್ಮಾಣ ಮಾಡುತ್ತಿದ್ದಾರೆ. ಕಲೆ, ಸಂಸ್ಕೃತಿ ವಿಚಾರದಲ್ಲಿ ನಮ್ಮ ವಿರೋದವಿಲ್ಲ. ಆದರೆ ಅದರ ಹೆಸರಿನಲ್ಲಿ ಕನ್ನಡಿಗರ ಮೇಲೆ ಧೌರ್ಜನ್ಯ ಮಾಡಿದರೆ ಕರ್ನಾಟಕ  ನವನಿರ್ಮಾಣ ಸೇನೆ ಸಹಿಸಿಕೊಳ್ಳುವದಿಲ್ಲ. ವಿವಾದ ಹುಟ್ಟುಹಾಕುವ ಸಲುವಾಗಿಯೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರ್ಯಕ್ರಮಕ್ಕೆ ಅನುಮತಿ ನೀಡಿ ದೊಡ್ಡ ತಪ್ಪು ಮಾಡಿದೆ. ಕನ್ನಡಪರವಾದ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸುವ ಬೆಳಗಾವಿ ಜಿಲ್ಲಾಡಳಿತ ಯಾವ ಪುರುಷಾರ್ತಕ್ಕೆ ಮರಾಠಿ ಪುಂಡರಿಗೆ ಮಣೆ ಹಾಕುತಿದೆಯೋ ಗೊತ್ತಾಗುತ್ತಿಲ್ಲ. ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಗಡಿವಿಚಾರ ನಿರ್ಣಯ, ಕನ್ನಡಿಗರ ಸ್ವಾಭಿಮಾನ ಕೆರಳಿಸುವ ಯಾವುದೇ ಪ್ರಚೋದನಕಾರಿ ಮಾತುಗಳನ್ನು  ಆಡಿದರೆ ಕಾರ್ಯಕ್ರಮದ ಆಯೋಜಕರ ಮೇಲೆ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಬೇಕೆಂದು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಖಡಕ್ ಆಗಿ ಸೂಚಿಸಬೇಕೆಂದು ಮನವಿಯಲ್ಲಿ ಸೂಚಿಸಲಾಯಿತು. 
ಸಮಾರೊಪ ಸಮಾರಂಭಕ್ಕೆ ಶಿವಸೇನೆಯ ಮುಖ್ಯಸ್ಥ ಉದ್ಭವ ಠಾಕ್ರೆಗೆ ಆಹ್ವಾನಿಸುತ್ತಾರೆ. ಕನ್ನಡಿಗರೆ ಪದೇ ಪದೇ ಅಪಮಾನ ಮಾಡಿರುವ, ಕೊಲ್ಲಾಪುರದಲ್ಲಿ ಕರ್ನಾಟಕ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ, ಕರ್ನಾಟಕ ಸಾರಿಗೆ ವಾಹನಗಳು ಸೇರಿದಂತೆ ಚಾಲಕರ ಮೇಲೆ ಮಾಡಿದ ಹಲ್ಲೆಕೋರ ಶಿವಸೇನೆಯ ನಾಯಕ ಉದ್ಭವ ಠಾಕ್ರೆಗೆ ಯಾವುದೇ ಕಾರಣಕ್ಕೂ ಬೆಳಗಾವಿ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಬಾರದೆಂದು ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಉದ್ಭವ ಠಾಕ್ರೆಗೆ ವೇದಿಕೆ ಹತ್ತಲು ಬಿಡುವುದಿಲ್ಲ ಆ ಸಮಯದಲ್ಲಿ ಏನಾದರೂ ಅನಾಹುತ ನಡೆದರೆ ಸರಕಾರವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. 
  ವಿಜಯಕುಮಾರ ಕವಲೂರ ರಾಜ್ಯಸಂಚಾಲಕರು ಕನಸೇ ಬಶೀರ್ ಅಹಮ್ಮದ ಪಲ್ಟನ್, ಹನಮಂತಪ್ಪ ಕಾಯಗಡ್ಡಿ, ಆನಂದ ಮಡಿವಾಳರ, ರವಿ ಪಾಟೀಲ, ಶೇಷಣ್ಣ ಶಹಪೂರ, ಶ್ರೀಮತಿ ರಾಜಮ್ಮ ಓಜನಳ್ಳಿ, ಶ್ರೀಮತಿ ಖಾಜಮ್ಮ, ವೀರೇಶ ಅಂಗಡಿ, ಪ್ರಕಾಶ ಮೈದೂರ, ರವಿ ಡೊಳ್ಳಿನ, ಈರಪ್ಪ ಡೊಳ್ಳಿನ ಮುಂತಾದವರು ಉಪಸ್ಥಿತರಿದ್ದರು.   
Please follow and like us:
error