fbpx

ಭಾಗ್ಯನಗರದಲ್ಲಿ ಕೈ ಮುಗ್ಗ ನೇಕಾರರ ದಿನಾಚರಣೆ.

ಕೊಪ್ಪಳ – ತಾಲೂಕಿನ ಭಾಗ್ಯನಗರ ಗ್ರಾಮದಲ್ಲಿ ಶುಕ್ರವಾರ ದಂದು ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ (ರಿ) ಬಾಗ್ಯನಗರದಲ್ಲಿ ಕೈ ಮಗ್ಗ ನೇಕಾರರ ದಿನಾಚರಣೆಯನ್ನು ಆಚರಿಸಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಮನಪ್ಪ ಕಬ್ಬೇರ ವಹಿಸಿದ್ದರು, ಉದ್ಘಾಟಕರಾಗಿ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿಯವರು ಉದ್ಘಾಟಿಸಿ ಹಾಗೂ ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು ಮಾತನಾಡಿ ಕೈ ಮಗ್ಗ ನೇಕಾರಿಕೆರ ಬೆಳೆದು ಬಂದ ಹಾದಿಯನ್ನು ಸ್ಮರಿಸುತ್ತಾ ವಿದ್ಯಾರ್ಥಿಗಳಿಗೆ ಇದರ ಹೆಚ್ಚಿನ ಪ್ರಯೋಜನಾ ಹಿಂದೆ ಭಾಗ್ಯನಗರದ ನಾಗರಿಕರು ಪಡೆಯುವದರಲ್ಲಿ ಯಶಸ್ವಿಗೊಂಡಿದ್ದಾರೆಂದು ಹೇಳುವುದರ ಮೂಲಕ ಹಿತ ನುಡಿಗಳನ್ನು ಪೂರ್ಣಗೊಳಿಸಿದರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಮನಪ್ಪ ಕಬ್ಬೇರ ಇವರು ಸಹಿತ ಭಾಗ್ಯನಗರದ ಈ ಕೈ ಮಗ್ಗ ನೇಕಾರಿಕೆ ಆರಾಧ್ಯದೈವವೇ ಅಗಿತ್ತು ಎಂದು ಹೇಳುತ್ತಾ ವಿವಿಧ ನೇಕಾರಿಕೆಯ ವಿಷಯವನ್ನು ಮಂಡಿಸಿ ಹೇಳುತ್ತಾ ಸರ್ಕಾರದಿಂದ ಈ ನಕಾರಿಕೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೊತ್ಸಾಹವನ್ನು ಮಾಸಿಕ ಸಂಭಾವನೆ ಮೂಲಕ ನೀಡಿ ಬೆಳಸಬೇಕೆಂದು ಸರ್ಕಾರಕ್ಕೆ ವಿನಂತಿಸುತ್ತಾ ಅಧ್ಯಕ್ಷತೆ ಸಮಾರೊಪತೆಯನ್ನು ಗೈದರು.
    ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಯಮನಪ್ಪ ನರಗುಂದ, ಹನುಮಂತಪ್ಪ ಕಟ್ಟಿ, ಮಹಾದೇವಪ್ಪ ಏರಿ, ಹಾಗೂ ಗಿರೀಶ ಪಾನಘಂಟಿಯವರು ಭಾಗವಹಿಸಿ ಕಾರ್ಯಕ್ರಮವನ್ನು ಯಸಸ್ವಿಗೊಳಿಸಿದರೆಂದು ಶಾಲಾ ಆಡಳಿತ ಮಂಡಳಿ ಅಧಿಕಾರಿಯಾದ ವಾದಿರಾಜ ದೇಸಾಯಿಯವರು ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!