ಚುನಾವಣಾ ವೇಳೆಯಲ್ಲಿ ನೀಡಿದ ಭರವಸೆಗಳನ್ನು ಪ್ರಾಮಾಣಿಕವಾಗಿ ನೇರವೇರಿಸುವೇನು-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ-೦೮, ಕ್ಷೇತ್ರದ ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಗುಡಗೇರಿ, ಕವಲೂರು, ಮುರ್ಲಾಪುರ, ಬೆಳಗಟ್ಟಿ, ಹಟ್ಟಿ, ಹೈದರನಗರ, ಕೇಸಲಾಪುರ, ಹಲವಾಗಲಿ ಹಾಗೂ ನೇಲೋಗಿಪುರ ಗ್ರಾಮಗಳಲ್ಲಿ ಕರ್ನಾಟಕ ಗ್ರಾಮ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಲೋಕೋಪಯೋಗಿ ಇಲಾಖೆವ

ತಿಯಿಂದ ರೂ. ಅಂದಾಜು ಮೊತ್ತ ೧.೫ ಕೋಟಿಗಳ ಸಿಸಿ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ, ಅಂಗನವಾಡಿ ಕಟ್ಟಡ ಕಾಮಗಾರಿಗಳ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ ಭರವಸೆಗಳಂತೆ ಪ್ರತಿಗ್ರಾಮಗಳಿಗೂ ಉತ್ತಮ ಗುಣಮಟ್ಟದ ಸಿಸಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕಗಳು, ಗ್ರಂಥಾಲಯ, ಅಂಗನವಾಡಿ ಕಟ್ಟಡ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಾಣಮಾಡಿ ಪ್ರತಿ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು  ಕಲ್ಪಿಸಿವೇನು. ಗ್ರಾಮಗಳ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಇವುಗಳ ಸರ್ವಾಂಗೀಣ ಅಭಿವೃದ್ಧಿ ಮಾಡುವೇನು ಎಂದು ಹೇಳಿದರು. ಈ ಸಂದರ್ಭದಲ್ಲಿ ಹಟ್ಟಿ ಭರಮಪ್ಪ, ಫಕೀರಪ್ಪ ಬಿಸನಳ್ಳಿ, ಶಾಹೀದ್ ಕವಲೂರು, ದೇವಪ್ಪ ಕವಲೂರು, ಸಿದ್ದಪ್ಪ ಗಿಣಗೇರಿ, ತೋಟಪ್ಪ ಸಿಂಟರ್, ಭೀಮಸೇಪ್ಪ ಬೋಚನಹಳ್ಳಿ, ಪರಶುರಾಮ ಭೈರಾಪುರ, ಹೊನ್ನಪ್ಪ ಗೌಡ, ಗುರುಬಸವರಾಜ ಹಳ್ಳಿಕೇರಿ, ನಾರಾಯಣಪ್ಪ ಬೇಟಗೇರಿ, ಅಡಿವೆಪ್ಪ ರಾಟಿ, ಸುರೇಶ ದಾಸರೆಡ್ಡಿ, ನಜೀರ್ ಅಳವಂಡಿ, ಇಸ್ಮಾಹಿಲ್, ಮೈನುಸಾಬ್ ಕವಲೂರು, ಗುತ್ತಿಗೆದಾರರಾದ ಸಂಗನಗೌಡ್ರು, ಭೂಸೇನಾ ನಿಗಮದ ಅಧಿಕಾರಿಗಳು, ನಿರ್ಮೀತಿ ಅಭಿಯಂತರರು ಇನ್ನೂ ಅನೇಕ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Related posts

Leave a Comment