ಪ್ರಕಾಶ ಕಂದಕೂರಗೆ ರಾಷ್ಟ್ರ ಪ್ರಶಸ್ತಿ.

ಕೊಪ್ಪಳ, ಡಿ.೦೮ ತುಮಕೂರಿನಲ್ಲಿ ಡಿ.೦೬ ರಂದು ನಡೆದ ರಾಷ್ಟ್ರೀಯ ಅನು ಛಾಯಾಚಿತ್ರೋತ್ಸವದಲ್ಲಿ ಛಾಯಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಜೀವಮಾನದ ಸಾಧನೆಗಾಗಿ ಕೊಪ್ಪಳದ ಖ್ಯಾತ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
          ರಾಜ್ಯ ಕಾನೂನು ನ್ಯಾಯ ಹಾಗೂ ಸಂಸದೀಯ, ಉನ್ನತ ಶಿಕ್ಷಣ ಸಚಿವರಾದ ಟಿ.ಬಿ.ಜಯಚಂದ್ರ ಅವರು ಪ್ರಕಾಶ ಕಂದಕೂರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ ಛಾಯಾಚಿತ್ರೋತ್ಸವದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು ೫೬ ಪತ್ರಿಕಾ ಛಾಯಾಗ್ರಾಹಕರಿಗೆ ಅವರ ಜೀವಮಾನದ ಸಾಧನೆಗಾಗಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರಾಷ್ಟ್ರಪತಿಗಳ ಪತ್ರಿಕಾ ಛಾಯಾಗ್ರಾಹಕರಾದ ಸಮರ ಮಂಡ
          ಸಮಾರಂಭದಲ್ಲಿ ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸಹಕಾರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ||ಸಿ.ಸೋಮಶೇಖರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ವಿಶುಕುಮಾರ್, ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ, ಉದಯವಾಣಿ ಪತ್ರಿಕೆಯ ಸಹಾಯಕ ಹಿರಿಯ ಸಂಪಾದಕ ಬಿ.ವಿ.ಮಲ್ಲಿಕಾರ್ಜುನಯ್ಯ, ಮುಖ್ಯಮಂತ್ರಿಗಳ ಮಾಧ್ಯಮ ಕಾಯದರ್ಶಿ ಕೆ.ವಿ.ಪ್ರಭಾಕರ ಸೇರಿದಂತೆ ಮಾಧ್ಯಮ ಕ್ಷೇತ್ರದ ಹಿರಿಯ ಸಾಧಕರು ಹಾಗೂ ಇತರರು ಉಪಸ್ಥಿತರಿದ್ದರು.

ಲ್, ರಾಜ್ಯಪಾಲರ ಛಾಯಾಗ್ರಾಹಕರಾದ ಅಂಥೋಣಿ ಅಂಜಿ, ಮುಖ್ಯಮಂತ್ರಿಗಳ ಛಾಯಾಗ್ರಾಹಕರಾದ ವಿಶ್ವೇಶ್ವರಪ್ಪ, ಖ್ಯಾತ ಛಾಯಾಗ್ರಾಹಕರುಗಳಾದ ಟಿ.ಕೆಂಪಣ್ಣ, ಶಂಕರ ಚಿಂತಾಮಣಿ ಅವರೊಂದಿಗೆ ಪ್ರಕಾಶ ಕಂದಕೂರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Please follow and like us:
error