ಉತ್ತಮ ಪುಸ್ತಕಗಳನ್ನು ಓದಿ ವಿದ್ಯಾವಂತರಾಗಿ –

 ವೀರಬಸಪ್ಪ ಪಟ್ಟಣಶೆಟ್ಟಿ 
ಕೊಪ್ಪಳ :- ಇರಕಲ್ ಗಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಯಲ್ಲಿ ನಡೆದ ತೆಗೆಯಿರಿ ಪುಸ್ತಕ ಹೊರಗೆ ಹಚ್ಚಿರಿ ಜ್ಞಾನದ ದೀವಿಗೆ ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಶ್ರದ್ದಾ ವಾಚನಾಲಯನವನ್ನು  ಉದ್ಘಾಟಿಸಿದ ಗ್ರಾಮದ ಗುರುಹಿರಿಯರಾದ ವೀರಬಸಪ್ಪ ಪಟ್ಟಣಶೆಟ್ಟಿಯವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರತಿದಿನ ಪಠ್ಯ ಪುಸ್ತಕಗಳ ಜೊತೆಗೆ ವಾಚನಾಲಯದಲ್ಲಿರುವ ಉತ್ತಮ ಪುಸ್ತಕಗಳನ್ನು ಓದಿ ವಿದ್ಯಾವಂತರಾಗಿ ಎಂದು ಹೇಳಿದರು. ಇದಕ್ಕು ಮೊದಲು ಬೆಳಿಗ್ಗೆ ೧೧ ರಿಂದ ೧೧:೩೦ ರ ವರೆಗೆ ಎಲ್ಲಾ ಮಕ್ಕಳು ಶಾಲಾ ವಾಚನಾಲಯದಿಂದ ತಮಗೆ ಇಷ್ಟವಾದ ಪುಸ್ತಕ ಒಂದನ್ನು ತೆಗೆದುಕೊಂಡು ಮೌನ ಓದುವುದನ್ನು ಮಾಡಿದರು. ಮಕ್ಕಳೊಂದಿಗೆ ಗ್ರಾ.ಪಂ ಅಧ್ಯಕ್ಷರು ಎಸ್.ಡಿ.ಎಂಸಿ ಅಧ್ಯಕ್ಷರು ಸದಸ್ಯರು ಗ್ರಾಮದ ಹಿರಿಯರು ಅಧಿಕಾರಿಗಳು ಶಿಕ್ಷಕರುಗಳು ಭಾಗವಹಿಸಿ ಒಂದೊಂದು ಪುಸ್ತಕವನ್ನು ತಗೆದುಕೊಂಡು ಓದಿದರು ಜಯಶ್ರೀ ಜಕ್ಕಲಿ ಸಹ ಶಿಕ್ಷಕಿ ಪ್ರಾಸ್ತವಿಕವಾಗಿ ಮಾತನಾಡಿದರು. ಡಯಟ್‌ನ ಉಪನ್ಯಾಸಕರಾದ ಕೃಷ್ಣಾ ಹಾಗೂ ತಾಲೂಕ ಅಕ್ಷರ ದಾಸೋಹದ ಸಹಾಯಕ ನಿರ್ದೆಶಕರಾದ ಅಶೋಕ ಕುಲಕರ್ಣಿ ಮಾತನಾಡಿದರು. ಶಾಲೆಯ ಎಸ್.ಡಿ.ಎಂ.ಸಿಯ ಅಧ್ಯಕ್ಷರಾದ ವಿರೇಶ ಪಿನ್ನಿ, ಗ್ರಾಮ ಪಂ. ಅಧ್ಯಕ್ಷರಾದ ವೀರುಪಾಕ್ಷಪ್ಪ ಬೂದಿಹಾಳ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗವಿಸಿದ್ದಪ್ಪ ರಾಮಣ್ಣ ಪಿನ್ನಿ, ಗಾಳೆಪ್ಪ ಹರಿಜನ್, ಫಕಿರಪ್ಪ ಮುಧೋಳ, ಸಂಗಪ್ಪ ಬಳಿಗಾರ, ಸಂಗಪ್ಪ ವಟ್ಟಪರವಿ ಅತಿಥಿಗಳಾಗಿ ಭಾಗವಹಿಸಿದ್ದರು . ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಸುಧೆಂದ್ರ,ಜೆ,ದೇಸಾಯಿ, ಪುಸ್ತಕ ಜೋಳಿಗೆಯ ಬಗ್ಗೆ ತಿಳಿಸದರಲ್ಲದೆ. ಸ್ವಯಂವಾಗಿ ಶಾಲಾ ವಾಚನಾಲಯಕ್ಕೆ ಪುಸ್ತಕಗಳನ್ನು ಖರಿಧಿಸಲು ೫೦೦ ರೂ ಗಳನ್ನು ಪುಸ್ತಕ ಜೋಳಿಗೆಗೆ ಹಾಕಿದರು. ನಂತರ ಗ್ರಾಮದ ಹಿರಿಯರಾದ ವೀರಬಸಪ್ಪ ಪಟ್ಟಣ ಶೆಟ್ಟಿ ೧೦೦೦ ರೂ ದೇಣಿಗೆ ನೀಡಿದರು ಅಲ್ಲದೆ ಶಾಲೆಯ ಸಹ ಶಿಕ್ಷಕರಾದ ನಾಗಲಿಂಗಪ್ಪ ಕಮ್ಮಾರ, ಭಾರತಿ ಜೋಶಿ, ಸುಮಿತ್ರಾ ವೀರನಗೌಡ, ಇವರು ಸಹ ತಲಾ ೫೦೦ ರೂದೇಣಿಗೆ ನೀಡಿದರು. ಪವೀತ್ರಾ ಶಿಕ್ಷಕಿ ಸ್ವಾಗತಿಸಿದರೆ ಮಲ್ಲಮ್ಮ ಸಜ್ಜನ ವಂದಿಸಿದರು. ನಾಗಲಿಂಗಪ್ಪ ಕಮ್ಮಾರ ಕಾರ್ಯಕ್ರಮವನ್ನು ನಿರೂಪಿಸಿದರು. 
Please follow and like us:
error