ಬಿಎಸ್ ಆರ್ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಂದ ಕೆ.ಎಂ.ಸೈಯದ್‌ಗೆ ಸನ್ಮಾನ

 ಕೊಪ್ಪಳ,ಡಿ,೮: ನಗರದ ಬಿಎಸ್ ಆರ್ ಕಾಂಗ್ರೇಸ್ ಪಕ್ಷದ ಮುಖಂಡ ಹಾಗೂ ಸೈಯದ್ ಪೌಂಡೇಶನ್ ಚಾರೀಟೇಬಲ್ ಟ್ರಸ್ಟನ್ ಅಧ್ಯಕ್ಷ ಕೆ.ಎಂ ಸೈಯದ್ ಅವರಿಗೆ ದೆಹಲಿಯ ಇಂದಿರಾ ಪ್ರೀಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಕ್ಕೆ ಹನುಮನಹಳ್ಳಿ ಬಿಎಸ್ ಆರ್ ಕಾಂಗ್ರೇಸ್ ಕಾರ್ಯಕರ್ತರು ಸನ್ಮಾನಿಸಿದರು.
ಅವರು ನಗರದ ಬಿಎಸ್ ಆರ್ ಕಾಂಗ್ರೇಸ್ ಕಛೇರಿಯಲ್ಲಿ ಸನ್ಮಾನಿಸಿ ವಾಲ್ಮೀಕಿ ಸಮಾಜದ ಯುವಘಟಕದ  ಅಧ್ಯಕ್ಷ ಹಾಗೂ ಪಕ್ಷದ ಕಾರ್ಯಕರ್ತ ನಾಗರಾಜ ಮುಂಡರಗಿ ಮಾತನಾಡಿ ಕೆ.ಎಂ. ಸೈಯದ್ ಅವರ ಸಮಾಜಿಕ ಸೇವೆಯನ್ನು ಹಾಗೂ ನಗರದಲ್ಲಿ  ಟ್ಯಾಂಕರ ಮೂಲಕ ಉಚಿತ ನೀರು ಸರಬರಾಜು ಮಾಡಿ ಜನತೆಯ ದಾಹ ತೀರಿಸಿದ ಇಂತಹ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಇವರ ಸಾಮಾಜಿಕ ಸೇವೆ ಇನ್ನೂ ಹೆಚ್ಚು ಜರುಗಲಿ ಎಂದರು.
ಈ ಸಂದರ್ಭದಲ್ಲಿ ಬಿಎಸ್ ಆರ್ ಕಾಂಗ್ರೇಸ್ ಪಕ್ಷದ ಮುಖಂಡ ಪ್ರಭುಗೌಡ ಪಾಟೀಲ್, ಆರ್. ಎಚ್ .ಗುಡಿ ಭಾಗ್ಯನಗರ ,ಸುಧಾಕರ್,ಯಮನೂರಪ್ಪ, ಸುಭಾಷ್, ಬಡಕಪ್ಪ ಬಗನಾಳ್, ಧರ್ಮಗೌಡ ತಿಗರಿ ಮತ್ತೀತರರು ಉಪಸ್ಥಿತರಿದ್ದರು.

Leave a Reply