ಬೈರನಾಯಕನಹಳ್ಳಿ ಗ್ರಾಮದಲ್ಲಿ ಸುಜಲಾ ಯೋಜನೆ ತರಬೇತಿ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ನಡೆದ ತೋಟಗಾರಿಕೆ ಇಲಾಖೆ (sಸುಜಲಾ೩) ಮತ್ತು ವೆಡ್ಸ ಸಂಸ್ಥೆಯ ಕೊಪ್ಪಳ ಇವರ ಸಹಯೋಗದೊಂದಿಗೆ ಸುಜಲಾ ಯೋಜನೆಯ ೩ನೇ ಹಂತದ ಅಡಿಯಲ್ಲಿ ರೈತರಿಗೆ ತೋಟಗಾರಿಕೆ ಬೆಳೆಗಳ ಬೇಸಾಯ ಪದ್ದತಿಗಳು ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
    ಸದರಿ ಕಾರ್ಯಕ್ರಮದಲ್ಲಿ ಯೋಜನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಯೋಜನಾಧಿಕಾರಿಗಳಾದ ಶ್ರೀ ಮಹಮ್ಮದ ಅಲಿ ಅವರು ಸುಜಲಾ ಯೋಜನೆಯಡಿಯಲ್ಲಿ ತೋಟದ ಬೆಳೆಗಾರರ ರೈತರ ಗುಂಪುಗಳನ್ನು ರಚನೆ ಮಾಡಿ ಅದರ ಮೂಲಕ ಸುಜಲಾ ಯೋಜನೆಯ ತೋಟಗಾರಿಕೆ ಬೆಳೆಗಳನ್ನು ಹಾಗೂ ತರಕಾರಿ ಬೆಳೆಗಳನ್ನು ಬೆಳೆಯಲು ಸ್ಥಳಿಯ ರೈತರಿಗೆ ಅವಕಾಶವಿದ್ದು ಅದರ ಸದುಪಯೋಗ ಪಡೆದುಕೊಳ್ಳಲು  ಹೇಳಿದರು.
    ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರದ ಮುಂದಾಳು ಮತ್ತು ಸಸ್ಯರೋಗ ತಜ್ಞರಾದ ಡಾ. ಮಹಾಂತೇಶ.ಬಿ.ಪಾಟೀಲ ಅವರು ಮಾತನಾಡಿ ಮಣ್ಣಿನ ಅವಶ್ಯಕತೆ ಹಾಗೂ
ಅದರ ಸಂರಕ್ಷಣೆ ಮತ್ತು ಅಭಿವೃದ್ಧಿ ಪಡಿಸುವ ವಿಧಾನಗಳನ್ನು ಕೆಲವು ಮುಂದುವರೆದ ದೇಶಗಳ
ತಾಂತ್ರಿಕತೆಯ ಉದಾಹರಣೆಗಳೊಂದಿಗೆ  ಅಭಿವೃದ್ಧಿ ಯಾಗಿರುವುದನ್ನು ಕುರಿತು ತರಬೇತಿಯಲ್ಲಿ
ಭಾಗವಹಿಸಿದ ರೈತರಿಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲು
ಕೆಲವೊಂದು ಸೂಚನೆಗಳನ್ನು ರೈತರಿಗೆ ತಿಳಿಸಿದರು.
ಇನ್ನೋರ್ವ ವಿಷಯ ತಜ್ಞರಾದ  ಯುಸೂಫ ಅಲಿ ನಿಂಬರಗಿ ಇವರು ಮಾತನಾಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೊದಲು ಇಲ್ಲಿನ ಹವಾಮಾನಕ್ಕೆ ಸೂಕ್ತವಾದ ತಳಿಗಳನ್ನು ಕೃಷಿ ತಜ್ಞರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಿಕೊಂಡು ಬೆಳೆಯಬೇಕೆಂದು ತಿಳಿಸಿದರು ಅಲ್ಲದೆ ರೈತರಿಗೆ ತೋಟಗಾರಿಗೆ ಮತ್ತು ತರಕಾರಿ ಬೆಳೆಗಳ ಆದಾಯ ತರುವ ಬೆಳೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.
     ವೆಡ್ಸ ಸಂಸ್ಥೆಯ ಅಧ್ಯಕ್ಷರಾದ ವ್ಹಿ.ಚಕ್ರಪಾಣಿ ಇವರು ಮಾತನಾಡಿ ಮಣ್ಣು ಮತ್ತು ನೀರು ರೈತರ ಕಣ್ಣುಗಳಿದ್ದಂತೆ ಆದ್ದರಿಂದ ಅವುಗಳ ರಕ್ಷಣೆ ರೈತರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
    ಅಧ್ಯಕ್ಷತೆಯನ್ನು ಸೋಮಲಿಂಗಪ್ಪ ಗ್ರಾ.ಪ. ಸದಸ್ಯರು ವಹಿಸಿದ್ದರು ಗ್ರಾಮದ ಮುಖಂಡರಾದ ಬಸವರಾಜ ದನದಮನೆ, ಸೋಮಣ್ಣ ಸಣ್ಣಹಳ್ಳಿ, ಹಾಗೂ ಚನ್ನಬಸಪ್ಪ ಜಿನ್ನಾಪೂರ. ಸೇರಿದಂತೆ ಜನ ಪ್ರತಿನಿಧಿಗಳು ರೈತಭಾಂದವರು ಭಾಗವಹಿಸಿದ್ದರು. ವೆಡ್ಸ ಸಂಸ್ಥೆಯ ಸಂಯೋಜಕರಾದ ಲಾಯಪ್ಪ ನಂದ್ಯಾಳ ಕಾರ್ಯಕ್ರಮ ನಿರ್ವಹಿಸಿದರು.

Please follow and like us:
error