ಇಕ್ಬಾಲ್ ಅನ್ಸಾರಿಯವರಿಂದ ಮತಯಾಚನೆ

ಕೊಪ್ಪಳ : ಗಂಗಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ೭-೪-೨೦೧೩ರಂದು ಕಾಮನೂರ,ಭೀಮನೂರ,ಸಂಗಾಪೂರ,ಲೇಬಗೇರಿ,ಯಲಮಗೇರಾ,  ತಾಳಕನಕಾಪೂರ,ಬುಡಶೆಟ್ನಾಳ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಜೆಡಿಎಸ್ ಪರ ಪ್ರಚಾರ ಮಾಡಿದರು. ವಿವಿಧ ಮುಖಂಡರುಗಳ ಮನೆಗೆ ಭೇಟಿ ನೀಡಿದರು. ಶಾಸಕರಾಗಿ,ಸಚಿವರಾಗಿ ತಾವು ಮಾಡಿದ ಜನಪರ ಕೆಲಸಗಳ ಬಗ್ಗೆ ಮಾತನಾಡಿದ ಇಕ್ಬಾಲ್ ಅನ್ಸಾರಿಯವರು ಹಲವಾರು ದಶಕಗಳಿಂದ ಜನಸೇವೆಗೆ ತೊಡಗಿಸಿಕೊಂಡಿರುವ ತಮ್ಮ ಕುಟುಂಬ ಜನಸೇವೆಯೇ ಜನಾರ್ಧನ ಸೇವೆ ಎಂದು ಪರಿಗಣಿಸಿ ನಿರಂತರ ಸೇವೆಯಲ್ಲಿ ತೊಡಗಿದೆ. ನಿಸ್ವಾರ್ಥದಿಂದ ಜನಸೇವೆಯಲ್ಲಿ ತೊಡಗಿರುವ ತಮಗೆ ಈ ಸಲದ ಚುನಾವಣೆಯಲ್ಲಿ  ಬಹುಮತದಿಂದ ಆಯ್ಕೆ ಮಾಡಿ ತಂದು ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್‍ಯ ಮಾಡಲು ಅನುವು ಮಾಡಿಕೊಡಬೇಕೆಂದು ಮತದಾರರಲ್ಲಿ ವಿನಂತಿಸಿಕೊಂಡರು.
  ಪಾದಯಾತ್ರೆಯ ಸಂದರ್ಭದಲ್ಲಿ ಹಾಲಿ ಗ್ರಾಮ ಪಂಚಾಯತ್ ಸದಸ್ಯರು,ಗ್ರಾಮದ ಹಲವಾರು ಜನಾಂಗದ ಮುಖಂಡರುಗಳು ಜೆಡಿಎಸ್ ಪಕ್ಷ ಸೇರಿದರು.
    ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಬಿ.ಖಾದ್ರಿ,ನಗರ ಘಟಕ ಯಮನಪ್ಪ ವಿಠಲಾಪೂರ ತಾಲೂಕ ಜೆಡಿಎಸ್ ಅಧ್ಯಕ್ಷರು, ಗ್ರಾಮೀಣ ಘಟಕದ ಅಧ್ಯಕ್ಷ ಮಲ್ಲೇಶಪ್ಪ ಗುಮಗೇರಿ,ತಾಲೂಕ ಕಾರ್‍ಯಾಧ್ಯಕ್ಷ ರಾಮಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರತಿ ತಿಪ್ಪಣ್ಣ, ಗಾಳೆಪ್ಪ ಗಂಟಿ ,ಬಸವರಾಜ ಚಿಲವಾಡಗಿ,ವಿರೇಶ ತಾವರಗೇರಿ,ಬಸವಕುಮಾರ ಪಟ್ಟಣಶೆಟ್ಟಿ , ಫಕೀರಗೌಡ ಲೇಬಗೇರಿ ಸೇರಿದಂತೆ ಹಲವಾರು ನಾಯಕರು, ಗ್ರಾಮಗಳ ಮುಖಂಡರು,ಗ್ರಾಮ ಪಂಚಾಯತ್ ಸದಸ್ಯರು,ಹಿರಿಯರು,ಪಕ್ಷದ ಕಾರ್‍ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

Please follow and like us:
error

Related posts

Leave a Comment