ಕಾರ್ಮಿಕರ ಭದ್ರತೆಯೇ ಸಿಐಟಿಯುನ ಗುರಿ : ಕರುಣಾನಿಧಿ

ಕೊಪ್ಪಳ: ಕಾರ್ಮಿಕರ ಭದ್ರತೆಗೆ ಸಿಐಟಿಯು ವರ್ಗ ಸಂಘಟನೆ  ಮೂಲಕ ಕಾರ್ಮಿಕರ  ಸದಾ ಬೆಂಗಾವಲಾಗಿ ನಿಂತಿದೆ, ಆದರೆ, ಕಾಮೀಕರ ಬೇಡಿಕೆಗೆ ಬಂಡವಾಳ ಸಾಹಿಗಳು ಭದ್ರತೆ ಒದಗಿಸಬೇಕು ಎಂದು ಸಿಐಟಿಯು ರಾಜ್ಯ ಮುಖಂಡ ಕರುಣಾನಿಧಿ ಹೇಳಿದರು.
ತಾಲೂಕಿನ ಭಾಗ್ಯನಗರದ ಗ್ರಾಮ ಪಂಚಾಯಿತಿ ಆವರಣದ ಸಮುದಾಯ ಭವನದಲ್ಲಿ ಸೆಂಟರ್‌ಆಫ್ ಇಂಡಿಯಾ ಟ್ರೇಡ್ ಯುನಿಯುನ್ಸ್ ಆಯೋಜಿಸಿದ ತಾಲೂಕು ಮಟ್ಟದ ಪ್ರಥಮ ಸಮ್ಮೇಳನ ಭಾನುವಾರ ಉದ್ಘಾಟಿಸಿ ಮಾತನಾಡಿದರು. ಸಿಐಟಿಯು ಸಂಘಟನೆ ಅಡಿಯಲ್ಲಿ ನಾನಾ ಸಂಘಟನೆ ಇದ್ದು, ಅಂಗನವಾಡಿ, ಬಿಸಿಯೂಟ, ಹಮಾಲರ ಸಂಘಟನೆ ಒಗ್ಗುಡಿಸುವ ಮೂಲಕ ಪ್ರಥಮ ಸಮ್ಮೇಳನ ನಾಂದಿಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಕೈಗಾರಿಕೆ ಬೆಳೆಯುತ್ತಿದೆ. ಇದರಿಂದ ಕಾರ್ಮಿಕರಿಗೆ ಹೆಚ್ಚು ಉದ್ಯೋಗ ದೊರೆಯುತ್ತದೆ. ಅಲ್ಲದೇ ಅಸಂಘಟಿತ ಕಾರ್ಮಿಕರು ಅನ್ಯಾಯವಾದ ಸಿಐಟಿಯು ನ್ಯಾಯ ದೊರಕಿಸುವ ಕೆಲಸ ಮಾಡಬೇಕು. ಒಗ್ಗಟ್ಟನ್ನು ಪ್ರದರ್ಶಿಸಿ ಭದ್ರತೆ ಪಡೆಯಬೇಕು. ಇದೇ ಯುಪಿಎ ಸರಕಾರದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅಂದಿನ ಆರ್ಥಿಕ ಸಚಿವರಾಗಿದ್ದಾಗ ಜಾಗತಿಕರಣ, ಉದಾರಿಕರಣ ಎನ್ನುವ ಮೂಲಕ ಹೊರ ದೇಶದಿಂದ ಹಣ ಬಂದರೆ ಕಾರ್ಮಿಕರಿಗೆ ಉದ್ಯೋಗ ಸೃಷ್ಠಿಯಾಗುತ್ತದೆ ಎಂದರು. ಆದರೆ, ಇದು ಮಾರುಕಟ್ಟೆಗೆ ಮಾತ್ರ ಸಮೀತವಾಗಿ ಹಿಡಿತ ಸಾಧಿಸಿದ್ದಾರೆ. ಇದು ಯಾವುದೇ ಕಾರ್ಮಿಕರಿಗೆ ಉದ್ಯೋಗ ಸೃಷ್ಠಿಯಾಗಲ್ಲಿಲ. ಇತ್ತೀಚೆಗೆ ರೂಪಾಯಿ ಮೌಲ್ಯ ಕುಸಿತದಿಂದ ದೇಶದ ಆರ್ಥಿಕ ಹಿನ್ನಡೆ ಉಂಟಾಗಿದೆ. ಇದರಿಂದ ಬಡ ಕಾರ್ಮಿಕರಿಗೆ ಬೆಲೆ ಏರಿಕೆಯಿಂದ ಕಷ್ಟ ಜೀವನ ಸಾಗಿಸಬೇಕಾಗಿದೆ. ನಿತ್ಯ ಉಪಯೋಗಿ ವಸ್ತುಗಳಾದ ತೈಲ, ಸಿಲೆಂಡರ್ ನಾನಾ ವಸ್ತುಗಳು ಬೆಲೆ ಏರಿಕೆಯಾಗಿದೆ. ಸರಕಾರ ಕೂಡಲೇ ಆರ್ಥಿಕ ನೀತಿ ಸರಿ ಪಡಿಸಿ ಬೆಲೆ ಇಳಿಕೆ ಮಾಡಬೇಕು ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಎ.ಹುಲಗಪ್ಪ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ಸಿಐಟಿಯು ತಾಲೂಕಾಧ್ಯಕ್ಷ ಎಸ್.ಎಸ್.ಹುಲಗಪ್ಪ, ಅಂಗನವಾಡಿ ನೌಕರರ ಜಿಲ್ಲಾಧ್ಯಕ್ಷೆ ಶಿವಮ್ಮ, ಅಕ್ಷರ ದಾಸೋಹ ನೌಕರರ ಜಿಲ್ಲಾಧ್ಯಕ್ಷೆ ಲಕ್ಷ್ಮಿ ಸೋನಾರೆ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅಮರೇಶ ಕಡಗದ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯ ಗೌಸ್‌ಸಾಬ್ ನದಾಫ್, ಮುಖಂಡರಾದ ಬಾಳಪ್ಪ ಹುಲಿಹೈದರ, ಹನುಮಂತ ಕಲ್ಮಂಗಿ, ದೇವಪ್ಪ ಭಾಗ್ಯನಗರ, ಖಾಸಿಂಸಾಬ್ ಸರ್ದಾರ ಮತ್ತಿತರರು ಉಪಸ್ಥಿತರಿದ್ದರು

Leave a Reply