೨೨ ರಂದು ಉತ್ತರ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಅಸ್ಥಿತ್ವಕ್ಕೆ.

ಕೊಪ್ಪಳ-20- ಎಲ್ಲಾ ರಂಗದಲ್ಲೂ ಉತ್ತರ ಕರ್ನಾಟಕದವರೆಂದರೆ ಒಂದು ತರಹದ ಅಸಡ್ಡೆಯಿಂದ ನೋಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ ಅದಕ್ಕೆ ವ್ಯಂಗ್ಯಚಿತ್ರಕಾರರು ಹೊರತಾಗಿಲ್ಲ.  ಸಾಕಷ್ಟು ಪ್ರತಿಭೆಗಳಿದ್ದರು ಎಲೆ ಮರೆಯಂತೆ  ಅವಕಾಶ ವಂಚಿತರಾಗಿದ್ದೆ ಹೆಚ್ಚು. ನಾವೂ ಎನೂ ಕಮ್ಮಿಯಿಲ್ಲ  ಎತ್ತರ ಎತ್ತರವಾಗಿ ಬೆಳೆಯಬೇಕು ಎನ್ನುವ ಮಹದಾಸೆಯಿಂದ ಉತ್ತರ ಕರ್ನಾಟಕ ವ್ಯಂಗ್ಯಚಿತ್ರಗಾರರ ಸಂಘ ಅಸ್ತಿತ್ವಕ್ಕೆ ಬರುತ್ತಿದೆ.
     ಧಾರವಾಡದ ಕರ್ನಾಟಕ ಕಾಲೇಜು ರಸ್ತೆಯ ಎಲ್ ಐ ಸಿ ಕಚೇರಿ ಹತ್ತಿರಆರ್ಟ್‌ಗ್ಯಾಲರಿಯಲ್ಲಿ ಇದೇ ೨೨ರ ಸೋಮವಾರ ೧೧ ಗಂಟೆಗೆ  ಸಂಘದ ಉದ್ಘಾಟನೆ ಮತ್ತು ಸದಸ್ಯರಿಂದ ವ್ಯಂಗ್ಯಚಿತ್ರ ಪ್ರದರ್ಶನ ಜರುಗಲಿದೆ.  ಆರ್‌ಟಿಓ ಇನ್ಸ್‌ಪೆಕ್ಟರ್ ಅರುಣ್ ಕಟ್ಟಿಮನಿ ಸಂಘದ
ಉದ್ಘಾಟಕರಾಗಿ ಹಾಗೂ ವ್ಯಂಗ್ಯಚಿತ್ರ ಪ್ರದರ್ಶನದ ಉದ್ಘಾಟಕರಾಗಿ ಹಿರಿಯ
ವ್ಯಂಗ್ಯಚಿತ್ರಕಾರ ಅಶೋಕ ಜೋಶಿ ಆಗಮಿಸುವರು.
  ಉತ್ತರ ಕರ್ನಾಟಕ ವ್ಯಂಗ್ಯಚಿತ್ರಕಾರ ಸಂಘದ ಸದಸ್ಯರುಗಳಾದ  ಮಧುಕರ್ ಎಕ್ಕೇರಿ, ಜಗದೀಶ ಭಜಂತ್ರಿ, ಜಗದೀಶ ಕರಿಗೌಡರ್, ಮಾನದೇವ್ ಕಾಗದಗಾರ, ಆರ್.ಜಿ.ಕುಲಕರ್ಣಿ, ಶರಣು ಚಟ್ಟಿ, ವಿಜಯಾನಂದ ಕಾಲವಾಡ, ಈರಣ್ಣ ಬೆಂಗಾಲಿ, ಗೊರವರ ಯಲ್ಲಪ್ಪ, ಅರುಣ್ ನಂದಗಿರಿ, ಸುರೇಶ್ ವಗ್ಗಾ, ಬದರಿ ಪುರೋಹಿತ ಕೊಪ್ಪಳ, ವೆಂಕಟೇಶ್ ಇನಾಂದಾರ್, ಕಾಂತೇಶ ಎಂ.ಬಡಿಗೇರ್, , ಗುರುನಾಥ್ ಬೋರಗಿ, ಪ್ರಸನ್ನ ನರಗುಂದ ರವರುಗಳ ವ್ಯಂಗ್ಯಚಿತ್ರ ಪ್ರದರ್ಶನಗೊಳ್ಳಲಿವೆ.

Please follow and like us:
error