ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದಿಂದ ಮಹಿಳಾ ದಿನಾಚರಣೆ

 ಪ್ರಗತಿಪರ ಮಹಿಳಾ ಸಂಘದ ಸುಮಾರು ೫೦ ಸದಸ್ಯರು ರಾಯಚೂರು ರಸ್ತೆಯಲ್ಲಿರುವ ಎ.ಐ.ಸಿ.ಸಿ.ಟಿ.ಯು. ಕಾರ್ಯಾಲಯದಲ್ಲಿ ಸಭೆ ಸೇರಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನ ಹೋರಾಟಗಳ ರೂಪರೇಷೆಗಳನ್ನು ನಿರ್ಧರಿಸಿದ್ದಾರೆಂದು ಪ್ರಗತಿಪರ ಮಹಿಳಾ ಸಂಘದ ಜಿಲ್ಲಾಧ್ಯಕ್ಷಿಣಿ ಶಾಂತಕುಮಾರಿ   ತಿಳಿಸಿದ್ದಾರೆ.
ಎ.ಐ.ಸಿ.ಸಿ.ಟಿ.ಯು. ಕಾರ್ಯಾಲಯದಲ್ಲಿ ನಡೆದ ಮಹಿಳಾ ದಿನಾಚರಣೆ ಅಂಗವಾಗಿ ಸ್ಲಮ್‌ಗಳಲ್ಲಿ ರಸ್ತೆಬದಿಗಳಲ್ಲಿ, ಕಾಲುವೆಬದಿಗಳಲ್ಲಿ ವಾಸಿಸುತ್ತಿರುವ ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಶೀಘ್ರದಲ್ಲಿಯೇ ಗಂಗಾವತಿಯ ಎಲ್ಲಾ ಸ್ಲಮ್‌ಗಳಿಂದ ಮಹಿಳೆಯರನ್ನು ಸಂಘಟಿಸಿ ನಗರಸಭೆಗೆ ಮುತ್ತಿಗೆಗಾಗಿ ರ‍್ಯಾಲಿ ನಡೆಸಬೇಕೆಂದು ತೀಮಾರ್ನಿಸಲಾಯಿತು. ಗಂಗಾವತಿಯ ರಾಯಚೂರು ರಸ್ತೆಯಲ್ಲಿರುವ ಆಟೋನಗರದ ಮೃತಪಟ್ಟ ಸದಸ್ಯರ ಪತ್ನಿಯರ ರಕ್ಷಣೆಗಾಗಿ ಮತ್ತು ಅವರ ಹಕ್ಕುಗಳಿಗಾಗಿ ಹೋರಾಟ ಮಾಡಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸ್ಲಮ್ ಜನಾಂದೋಲನ ಸಮಿತಿ ತಾಲೂಕ ಸಂಚಾಲಕಿ ಶಶಿಕಲಾ ಇವರು ಮಾತನಾಡಿ ಗಂಗಾವತಿ ನಗರದಲ್ಲಿ ಮನೆಗೆಲಸ ಮಹಿಳೆಯರ ಸಂಘಟನೆಗಳು ಬಲಪಡಿಸಬೇಕೆಂದು, ಮನೆಗೆಲಸ ಮಹಿಳೆಯರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಈ ಸಮಾರಂಭದಲ್ಲಿ ಪ್ರಗತಿಪರ ಮಹಿಳಾ ಸಂಘದ ತಾಲೂಕ ಅಧ್ಯಕ್ಷ ಪಾರ್ವತೆಮ್ಮ, ಉಪಾಧ್ಯಕ್ಷ ಗಂಗಮ್ಮ ಹಾಗೂ ಇನ್ನೀತರೆ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು. 
Please follow and like us:

Leave a Reply