You are here
Home > Koppal News > ಕೊಪ್ಪಳದಲ್ಲಿ ಕರಿಯ ಕಣ್‌ಬಿಟ್ಟ ಚಿತ್ರಪ್ರದರ್ಶನ ಸಂವಾದ

ಕೊಪ್ಪಳದಲ್ಲಿ ಕರಿಯ ಕಣ್‌ಬಿಟ್ಟ ಚಿತ್ರಪ್ರದರ್ಶನ ಸಂವಾದ

ಜೂನ ೨೪ ಕ್ಕೆ – ಕವಿತಾ ಲಂಕೇಶ – ಸುಬ್ಬು ಹೊಲಿಯಾರ ಜೊತೆ ಚಿತ್ರ ನೋಡಿ ಮಾತನಾಡುವ ಕಾರ್ಯಕ್ರಮ
ಕೊಪ್ಪಳ, ಜೂ. ೮. ಚಲನಚಿತ್ರ ರಂಗ ವಿಭಿನ್ನವಾದ ಕಾರ್ಯಗಳನ್ನು ನಿಂತರವಾಗಿ ಮಾಡುತ್ತಲೇ ಇರುತ್ತದೆ, ಅದೇ ರೀತಿ ಈಗ ಮತ್ತೊಂದು ಪ್ರಯೋಗವನ್ನು ಕವಿತಾ ಲಂಕೇಶ ನಿರ್ದೇಶನದ, ಸಾಹಿತಿ ಸುಬ್ಬು ಹೊಲಿಯಾರವರ ಕಥೆಯನ್ನು ಕರಿಯ ಕಣ್‌ಬಿಟ್ಟ ಎಂಬ ಮಕ್ಕಳ ಪೂರಕ ಚಿತ್ರವನ್ನು ಮಾಡಿದ್ದು, ಅದನ್ನು ಸ್ವತಃ ಚಿತ್ರದ ನಿರ್ದೇಶಕರಾದ ಕವಿತಾ ಲಂಕೇಶ, ಕಥೆಗಾರ ಸುಬ್ಬಣ್ಣ, ಬಿ. ಚಂದ್ರೇಗೌಡರ ಜೊತೆ ಚಿತ್ರ ನೋಡಿ ಸಂವಾದ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
         ಚಿತ್ರ ನೋಡಿದ ಮೇಲೆ ಚಿತ್ರದ ಕುರಿತು ಒಂದಷ್ಟು ಮಾತುಕತೆ ಸಹ ಇರುತ್ತದೆ. ಚಿತ್ರದ ಮಾತುಕಥೆ ಸಂದರ್ಭದಲ್ಲಿಯೇ ಲಘು ಉಪಹಾರದ ವ್ಯವಸ್ಥೆಯನ್ನು ಹಾಗೂ ಪಾನೀಯ ವ್ಯವಸ್ಥೆ ಮಾಡಲಾಗುವದು ಎಂದು ಕಾರ್ಯಕ್ರಮ ಸಂಘಟಿಸುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಳ್ಳಿ ಮಂಡಲದ ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಬೆಳ್ಳಿ ಮಂಡಲ, ಯುವಚೇತನ ಶ್ರೀ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಆಶ್ರಯದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದವರು ತಿಳಿಸಿದರು.
ಚಿತ್ರದಲ್ಲಿ ದುನಿಯಾ ವಿಜಯ್, ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದಾ ಖ್ಯಾತಿಯ ಯೋಗೀಶ ವಿಶೇಷ ಪಾತ್ರಗಳಲ್ಲಿ ನಟಿಸಿದ್ದು, ಬಾಲ ನಟ ಪ್ರಧ್ಯುಮ್ನ ಮನೋಜ್ಞವಾಗಿ ನಟಿಸಿದ್ದು, ಬಹುತೇಕ ಎಲ್ಲಾ ಪಾತ್ರಗಳನ್ನು ಬಣ್ಣ ಹಚ್ಚದೇ ಮಾಡಿರುವದು ಚಿತ್ರದ ಮತ್ತೊಂದು ವಿಶೇಷವಾದ ಸಂಗತಿ.
ಚಲನಚಿತ್ರ ರಂಗದಲ್ಲಿ ಸಾಹಿತ್ಯ, ಸಂಭಾಷಣೆ ಜೊತೆಗೆ ಜನರನ್ನು ಹಿಡಿದಿಟ್ಟುಕೊಂಡು ಚಿತ್ರ ತೋರಿಸಿ ಸಂದೇಶ ನೀಡಬೇಕು ಎನ್ನುವ ಉದ್ದೇಶದಿಂದ ಈ ಚಿತ್ರ ಮಾಡಲಾಗಿದೆ. ಈ ಮೂಉ ಜನ ನಟರ ಅಭಿಮಾನಿಗಳು ಬೆರಗಾಗುವ ರೀತಿಯಲ್ಲಿ ಅವರು ಅಭಿನಯಿಸಿದ್ದಾರೆ, ಆದ್ದರಿಂದ ಎಲ್ಲಾ ವರ್ಗದ ಜನರು ಚಿತ್ರವನ್ನು ನೋಡಬೇಕು ಎಂದು ನಿರ್ದೇಶಕಿ ಕವಿತಾ ಲಂಕೇಶ ಹೇಳುತ್ತಾರೆ.
ಕವಿತಾ ಲಂಕೇಶ ನಿರ್ದೇಶನದ ಜೊತೆ ನಿರ್ಮಾಣವನ್ನೂ ಮಾಡಿದ್ದಾರೆ ಅನಂತ್ ಅರಸ್ ಕ್ಯಾಮರಾ, ಇಸಾಕ್ ಸಂಗೀತ ನೀಡಿಉವ ಚಿತ್ರಕ್ಕೆ ಹರ್ಷ ಸಂಕಲನ ಮಾಡಿದ್ದಾರೆ, ಬಿ. ಚಂದ್ರೇಗೌಡರ ಸತ್ವಯುತ ಸಂಭಾಷಣೆ ಚಿತ್ರಕ್ಕಿದೆ, ಶ್ರೀನಿವಾಸ್ ಸಹ ಚಿತ್ರದ ಮತ್ತೊಬ್ಬ ನಿರ್ಮಾಪಕರು.
ಅದನ್ನೇ ಈಗ ನಾವು ಜನರಿಗೆ ಹೇಳುತ್ತಿದ್ದೇವೆ, ಮತ್ತು ಚಿತ್ರವನ್ನು ಒಂದು ಪ್ರಯೋಗ ತೋರಿಸುತ್ತಿದ್ದೇವೆ, ಅದರಲ್ಲಿ ೫೦೦ ಜನರಿಗೆ ಅವಕಾಶ ಮಾಡಿಕೊಡಲಾಗಿದೆ, ಈ ರೀತಿಯಲ್ಲಿಯಾದರೂ ಕನ್ನಡ ಚಿತ್ರ ರಂಗದ ಕಲೆಯನನು ಉಳಿಸುವ ಸಣ್ಣ ಪ್ರಯತ್ನವಾಗಿದೆ.
ಅಂದಹಾಗೆ ಈ ಚಿತ್ರವನ್ನು ಕೊಪ್ಪಳದ ಲಕ್ಷ್ಮೀ-ಶಿವೆ ಚಿತ್ರ ಮಂದಿರದಲ್ಲಿ ತೋರಿಸಲಾಗುತ್ತಿದೆ. ಜೂನ್ ೨೪ ಕ್ಕೆ ಬೆಳಿಗ್ಗೆ ೧೦ ಗಂಟೆಗೆ ಕಂಡಿತ ಬಿಡುವು ಮಾಡಿಕೊಂಡು ಬನ್ನಿರಿ ಎಂದು ಕೇಳಿಕೊಂಡಿರುವ ಸಂಘಟನಾ ತಂಡ. ಪಾಸ್‌ಗಳು ಸಿಗುವ ಸ್ಥಳಗಳ ಮಾಹಿತಿ ನಂತರ ನೀಡುವರು ಎಂದು ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ, ವಕೀಲ ವಿಜಯ ಅಮೃತರಾಜ್, ಶಿವಾನಂದ ಹೊದ್ಲೂರ ತಿಳಿಸಿದ್ದಾರೆ.

Leave a Reply

Top