ಯಲಬುರ್ಗಾ :ಮ್ಯಾನ್ಯಯಲ್ ಸ್ಕ್ಯಾವೆಂಜರ್‍ಗಳ ಮತ್ತು ಅವರ ಅವಲಂಬಿತರ ಬಗ್ಗೆ ಸಮೀಕ್ಷೆ

 ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ಗುರುತಿಸುವಿಕೆ ಮತ್ತು ಪುನರ್ವಸತಿಗೆ ರಾಷ್ಟ್ರಾದ್ಯಂತ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ಮತ್ತು ಅವರ ಅವಲಂಬಿತರ ನಿಖರವಾದ ಸಂಖ್ಯೆಯನ್ನು ಮತ್ತು ಅವರನ್ನು ಸದರ ವೃತ್ತಿಯಿಂದ ವಿಮುಕ್ತಿಗೊಳಿಸಿ ಪುನರ್ವಸತಿಗೊಳಿಸಲು ಸಮೀಕ್ಷೆ ಕೈಗೊಳ್ಳಲು ಸರ್ಕಾರ ಉದ್ದೇಶಿಸಿದೆ.  
ಯಲಬುರ್ಗಾ ಪಟ್ಟಣದಲ್ಲಿ ಯಾವುದೇ ಆಧುನಿಕ ಸಲಕರಣೆಗಳಿಲ್ಲದೇ ಕೈಯಿಂದ ಮಲವನ್ನು ಸ್ವಚ್ಛಗೊಳಿಸುವ, ಸಾಗಿಸುವ ಕೆಲಸದಲ್ಲಿ ತೊಡಗಿರುವ ಅಥವಾ ಆ ತರಹದ ಕೆಲಸದಲ್ಲಿ ಖಾಸಗಿ ವ್ಯಕ್ತಿಯಿಂದ ಅಥವಾ ಖಾಸಗಿ ಏಜೆನ್ಸಿಯಿಂದ ತೊಡಗಿಸಲಾದ ವ್ಯಕ್ತಿ ಅಥವಾ ಒಣ ಶೌಚಾಲಯ ಅಥವಾ ಒಣ ಶೌಚಾಲಯದಿಂದ ಹೊರಹೊಮ್ಮುವ ಮಲವನ್ನು ಕೈಯಿಂದ ತೆಗೆಯುವ ವ್ಯಕ್ತಿಗೆ ಮ್ಯಾನ್ಯುಯೆಲ್ ಸ್ಕ್ಯಾವೆಂಜರ್‍ಗಳು ಎನ್ನುತ್ತಾರೆ.
ಇಂತಹ ಮ್ಯಾನ್ಯುಯೆಲ್ ಸ್ಕ್ಯಾವೆಂಜರ್‍ಗಳು ಈ ಸ್ಕ್ಯಾವೆಂಜರ ವೃತ್ತಿಯನ್ನು ಮಾಡುವುದು ಶಿಕ್ಷಾರ್ಹ ಅಪರಾದವಾಗಿದ್ದು, ಇಂತಹ ಸ್ಕ್ಯಾವೆಂಜರ್ ವೃತ್ತಿ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದಲ್ಲಿ ಆ.07 ರೊಳಗಾಗಿ ನಿಗದಿತ ನಮೂನೆಯಲ್ಲಿ ಘೋಷಣೆ ಮಾಡಿಕೊಳ್ಳಬೇಕು. 
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08534-220528, ಬಸವಲಿಂಗಪ್ಪ ಭಾಸ್ಕರ ಮೊ.9844282692, ಮಹಾಂತೇಶ ಕುಂದಗೋಳ ಮೊ.9620017306 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯಲಬುರ್ಗಾ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
Please follow and like us:

Related posts

Leave a Comment