ಜಿಲ್ಲೆಯ ವಿವಿಧೆಡೆ ಮಹರ್ಷಿ ವಾಲ್ಮೀಕಿ ಜಯಂತಿ

ಸರಸ್ವತಿ ವಿದ್ಯಾಮಂದಿರದಲ್ಲಿ  ವಾಲ್ಮೀಕಿ ಜಯಂತಿ ಆಚರಣೆ
ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಇಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಂಸ್ಥೆಯ ಕಾರ‍್ಯದರ್ಶಿ ಆರ್.ಎಚ್.ಅತ್ತನೂರ ವಾಲ್ಮೀಕಿಯವರ ಜೀವನ ಕುರಿತು ಮಾತನಾಡಿದರು. ಶಿಕ್ಷಕಿಯರಾದ ಚಿದಾನಂದ,ಶಿವಗಂಗಾ ಕಾರ‍್ಯಕ್ರಮವನ್ನುದ್ದೇಶಿಸಿ ಮಾತನಾಡಿದರು 
ಕಾರ‍್ಯಕ್ರಮದಲ್ಲಿ ಶಿಕ್ಷಕಿಯರಾದ ಜಯಶ್ರೀ ಕುಲಕರ್ಣಿ,ರಂಗಮ್ಮ ಕಾಗಿ,ಮರಿಶಾಂತೇಶ ,ರೇವಯ್ಯ,ಶಿವಲೀಲಾ ಸೇರಿದಂತೆ ಇತರ ಶಿಕ್ಷಕ ,ಶಿಕ್ಷಕಿಯರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 
ಸಿ.ಪಿ.ಎಸ್.ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
ಕೊಪ್ಪಳ: ಸರ್ಕಾರಿ ಅಂಗವಿಕಲ ನೌಕರರ ಸಂಘ ಮತ್ತು ಸಿ.ಪಿ.ಎಸ್.ಶಾಲೆಯ ಸಂಯುಕ್ತಾಶ್ರಯದಲ್ಲಿ ಮಹರ್ಷಿ ವಾಲ್ಮೀಕಿ  ಜಯಂತಿಯನ್ನು ಆಚರಿಸಲಾಯಿತು.      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಭರಮಪ್ಪ ಕಟ್ಟಿಮನಿ ವಹಿಸಿದ್ದರು.

ಮಹರ್ಷಿ ವಾಲ್ಮೀಕಿಯ ತತ್ವ ಹಾಗೂ ಆದರ್ಶಗಳ ಕುರಿತಾಗಿ ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಕ್ಕಳಿಗೆ ತಿಳಿಸಿಕೊಟ್ಟರು.ಜಯಂತಿಯಲ್ಲಿ ಶಿಕ್ಷಕರಾದ ಶ್ರೀನಿವಾಸ,ವಿರುಪಾಕ್ಷಪ್ಪ ಬಾಗೋಡಿ,ಗುರುರಾಜ ಕಟ್ಟಿ,ವಿಜಯಾ,ಸುನಂದಬಾಯಿ, ಶಂಕ್ರಮ್ಮ ಬಂಗಾರಶೇಟ್ಟರ್,ಗೌಸೀಯಾಬೇಗಂ,ಗಂಗಮ್ಮ ತೋಟದ,ರಾಜೇಶ್ವರಿ,ಮೋಹಿನ್‌ಪಾಷಾಭೀ,ಭಾರತಿ ಮುಂತಾದವರು ಹಾಜರಿದ್ದರು. ಶಿಕ್ಷಕಿ ಭಾರತಿ ಕೊಡ್ಲಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯರಾದ ವಿಜಯಲಕ್ಷ್ಮೀ ಸ್ವಾಗತಿಸಿ,ರತ್ನಾ ವಂದಿಸಿದರು.

ಸರಕಾರಿ ಪ್ರಥಮ ದಜೆ‍್ ಕಾಲೇಜಿನಲ್ಲಿ ಪ್ರಾಚಾಯ‍್ ತಿಮ್ಮಾರೆಡ್ಡಿ ಮೇಟಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶಿಕ್ಷಕ/ಶಿಕ್ಷಕೇತರ ಸಿಬ್ಭಂಧಿ ಭಾಗವಹಿಸಿ್ದರು.

ಲೇಬಗೇರಿ ಗ್ರಾಮ ಪಂಚಾಯತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ 
ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮ ಪಂಚಾಯತಿಯಲ್ಲಿ ಗ್ರಾ.ಪಂ ಅಧ್ಯಕ್ಷರಾದ ರಾಮಣ್ಣ ಫಕೀರಪ್ಪ ಚೌಡ್ಕಿ ಇವರು  ವಾಲ್ಮೀಕಿ ಮಹರ್ಷಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ವಾಲ್ಮಿಕಿ ಜಯಂತಿಯನ್ನು ಆಚರಿಸಿದರು.   
ರಾಷ್ಟ್ರೀಯ ಸ್ವಚ್ಛತಾ ಜಾಗೃತ ಸಪ್ತಾಹ ಕಾರ್ಯಕ್ರಮದ ಬಗ್ಗೆ ಸರ್ವಸದಸ್ಯರಿಗೆ ಮನವರಿಕೆ ಮಾಡಿ ಮೊದಲು ಸದಸ್ಯರ ವಾರ್ಡಗಳನ್ನು ಸ್ವಚ್ಛವಾಗಿ ಮಾಡಿಕೊಳ್ಳಬೇಕು ಆಗ ಗ್ರಾಮ ಸ್ವಚ್ಛವಾಗುತ್ತದೆ  ಎಂದು ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟರು. 
ಗ್ರಾ.ಪಂ.ಲೇಬಗೇರಿ ಪಿ.ಡಿ.ಓ, ಕಾರ್ಯದರ್ಶಿಗಳು, ಎಸ್.ಡಿ.ಎ.ಎ.ಅಧಿಕಾರಿಗಳು, ಎ.ಪಿ.ಎಮ್.ಸಿ ಸದಸ್ಯರು, ಉಪಾಧ್ಯಕ್ಷರು, ಸರ್ವಸದಸ್ಯರು, ಗ್ರಾ.ಪಂ ಸಿಬ್ಬಂದಿ ವರ್ಗದವರು, ಗ್ರಾಮದ ಗುರು ಹಿರಿಯರು, ಯುವಕರು, ಉಪಸ್ಥಿತರಿದ್ದರು 
ಶಾಂತಿನಿಕೇತನ ಪಬ್ಲಿಕಸ್ ಶಾಲೆಯಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ  ಜಯಂತಿ
ಕೊಪ್ಪಳ-೦೮, ನಗರದ ಬಿ.ಎಸ್.ಜಿ.ಎಸ್ ಟ್ರಸ್ಟಿನ ಶಾಂತಿನಿಕೇತನ ಪಬ್ಲಿಕಸ್ ಶಾಲೆಯಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಂಸ್ಥೆಯ ಸಹಕಾರ್ಯದರ್ಶಿ  ಖಾಜಾವಲಿ ಕುದರಿಮೋತಿ ಅಧ್ಯಕ್ಷತೆ ವಹಿಸಿದ್ದರು. 
         ಮುಖ್ಯ ಅತಿಥಿಗಳಾಗಿ ಶಾಲಾ ಪಾಲಕರಾದ   ಹುಸೇನಸಾಬ ಬಹದ್ದೂರಬಂಡಿ, ಪ್ರಕಾಶ ಉತ್ತಂಗಿ ಉಪಸ್ಥಿತರಿದ್ದರು, ಶಾಲೆಯ ಶಿಕ್ಷಕರಾದ ಗವಿಸಿದ್ದಪ್ಪ ಭಜಂತ್ರಿ ಹಾಗೂ ಇನ್ನಿತರರು ಭಾಗವಹಿಸಿದ್ದರು. ಶಿಕ್ಷಕಿ ಕುಮಾರಿ ರಜಿಯಾಬೇಗಂ ಕಾರ್ಯಕ್ರಮ ನಿರೂಪಿಸಿದರು, ಸುನಂದಾ.ಬಿ ಸ್ವಾಗತಿಸಿದರು ಬಸನಗೌಡ ಪಾಟೀಲ್ ಕಾರ್ಯಕ್ರಮ ವಂದಿಸಿದರು. 
Please follow and like us:
error