ಜನಪದ ಸಾಹಿತ್ಯ ಜನಸಾಮಾನ್ಯರ ಶೃತಿ – ಹನಮಂತಪ್ಪ ಅಂಡಗಿ

ಕೊಪ್ಪಳ: ಮನುಷ್ಯನ ಮನಸ್ಸು ವಿಕಾಸವಾದಂತೆ ಜನಪದ ಸಾಹಿತ್ಯ, ಕಲೆಗಳು ಹೊರಹೊಮ್ಮಿರುವುದು ಸಾಮಾಜಿಕ ಜೀವನದ ಸಂಕೇತ. ಜನಪದ ಸಾಹಿತ್ಯ  ಜನಸಾಮಾನ್ಯರ ಶೃತಿಯಾಗಿದೆ. ಅದು ಬಾಯಿಂದ ಬಾಯಿಗೆ, ಊರಿಂದ ಊರಿಗೆ, ಯುಗದಿಂದ ಯುಗಕ್ಕೆ ಹರಿದು ಬರುತ್ತಿದೆ. ಜನಪದ  ಸಾಹಿತ್ಯ, ಕಲೆಗಳು  ಅನಕ್ಷರಸ್ಥರ ಸೃಷ್ಠಿಯಾಗಿವೆ. ಇಂತಹ ಅಮೂಲ್ಯವಾದ ಜನಪದ ಸಾಹಿತ್ಯವನ್ನು ಉಳಿಸಿ, ಬೆಳಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು. 
ಅವರು ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ  ಅಂಗವಾಗಿ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 
ಬೀಳಗಿಯ ಕವಿಗಳಾದ ಸಿದ್ದಪ್ಪ ಬಿದರಿ ಅವರು ಜನಸಾಮಾನ್ಯರಿಗೆ ತಲುಪುವ ರೀತಿಯಲ್ಲಿ ಅನೇಕ ಕವನಗಳನ್ನು ರಾಗಬದ್ದವಾಗಿ ಹಾಡುವುದರ ಮೂಲಕ ಎಲ್ಲರ ಗಮನ ಸೆಳೆದರು. 
ಹಿರೇಸಿಂದೋಗಿಯ ಚಿದಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಳವಂಡಿಯ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಮೈನಳ್ಳಿಯ ಸಿದ್ಧೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. 
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಹೆಚ್.ಎಲ್. ಹಿರೇಗೌಡರ, ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷರಾದ ಮುದೇಗೌಡ ಪಾಟೀಲ, ಬಳ್ಳಾರಿ-ರಾಯಚೂರು-ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕರಾದ ವೆಂಕನಗೌಡರ ಹಿರೇಗೌಡರ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರಾದ ಪುಂಡಲೀಕಪ್ಪ ದಾಸರ, ಕಾತರಕಿ-ಕಿನ್ನಾಳ ಆಧ್ಯಾತ್ಮ ವಿದ್ಯಾಶ್ರಮದ ಅಧ್ಯಕ್ಷರಾದ ಚಂದ್ರಾಮಪ್ಪ ಕಣಕಾಲ, ಹಿರಿಯರಾದ ವೆಂಕಣ್ಣ ಚೆಲ್ಲಾ, ತೋಟನಗೌಡ ಪೊಲೀಸ್ ಪಾಟೀಲ, ಗೊಂಡಬಾಳದ ವೇದಮೂರ್ತಿ ಮಲ್ಲಿಖಾರ್ಜುನಯ್ಯ ಸ್ವಾಮಿಗಳು, ಗ್ರಾ.ಪಂ. ಸದಸ್ಯರಾದ ಇಮಾiಸಾಬ ದೇಪುರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
Please follow and like us:
error