fbpx

ರಕ್ತದಾನ ಜೀವದಾನ -ರಾಘವೇಂದ್ರ ಹಿಟ್ನಾಳ

ಕೊಪ್ಪಳ :  ಅಂಜುಮನ್ ಕಮೀಟಿಯು ಕೊಪ್ಪಳದಲ್ಲಿ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ. ರಕ್ತದಾನ ಜೀವದಾನವಿದ್ದಂತೆ. ಒಬ್ಬರ ರಕ್ತದಾನ ಇನ್ನೊಬ್ಬರ ಜೀವವನ್ನುಳಿಸುತ್ತದೆ.  ಇಂತಹ ಪವಿತ್ರ ಕಾರ‍್ಯದಲ್ಲಿ ತೊಡಗಿರುವ ಅಂಜುಮನ್ ಕಮೀಟಿಯ ಸದಸ್ಯರಿಗೆ ಅಭಿನಂದನೆಗಳು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿರುವ ಅಂಜುಮನ್ ಕಮೀಟಿ ಕಟ್ಟಡದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ ಅಂಜುಮನ್ ಕಮಿಟಿ ಕೊಪ್ಪಳ ಇವರಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.  ಯುವ ಜನಾಂಗವು  ಇಂತಹ ಸಾಮಾಜಿಕ ಕಾರ‍್ಯಗಳಲ್ಲಿ ತೊಡಗಿಕೊಳ್ಳಬೇಕು. ಈ ಮೂಲಕ ಸ್ವಸ್ಥ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯ. ಇಂತಹ ಸಾಮಾಜಿಕ ಕಾರ‍್ಯಗಳು ನಿರಂತರವಾಗಿ ಜರುಗಲಿ ಇದಕ್ಕೆ ಯಾವತ್ತೂ ನನ್ನ ಸಹಕಾರ,ಸಹಯೋಗ ಇರುತ್ತೆ ಎಂದರು.
     ಈ ಸಂದರ್ಭದಲ್ಲಿ ೫೦ಕ್ಕೂ ಹೆಚ್ಚು  ಜನ ಸ್ವಯಂ ಸ್ಪೂರ್ತಿಯಿಂದ ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು.   ಕಾರ‍್ಯಕ್ರಮದಲ್ಲಿ  ಅಂಜುಮನ್ ಕಮೀಟಿ ಅಧ್ಯಕ್ಷರಾದ ಕಾಟನ್ ಪಾಷಾ, ಕಾಂಗ್ರೆಸ್ ಮುಖಂಡರಾದ ಕೆ.ಎಂ.ಸಯ್ಯದ್, ಮಾನ್ವಿಪಾಷಾ,  ಚಿಕನ್ ಪೀರಾ,ಗಫಾರ ದಿಡ್ಡಿ, ಅಕ್ಬರ ಪಲ್ಟನ್, ನಜೀರ್ ಮೌಲ್ ಸಾಬ ಅಜೀಜ ಮಾನ್ವೀಕರ್,  ಆಸೀಪ್ ಕರ್ಕಿಹಳ್ಳಿ,  ಆರ್.ಎಂ.ರಫಿ, ಮೆಹಮೂದ್ ಹುಸೇನಿ, ಶಿವಾನಂದ ಹೊದ್ಲೂರ, ಜಾಕಿರಹುಸೇನ್ ಕಿಲ್ಲೇದಾರ, ಎಂ.ಡಿ.ಜಿಲಾನ್, ಸಲೀಂ ಗೊಂಡಬಾಳ, ರಫೀ ಧಾರವಾಡ, ಜಾಫರ ಸಂಗಟಿ, ರಬ್ಬಾನಿ ನಾಸ್ ವಾಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!