ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಉಪನ್ಯಾಸಕರ ನೇಮಕ : ಅರ್ಜಿ ಆಹ್ವಾನ

  ಕೊಪ್ಪಳದ ಅಲ್ಪ ಸಂಖ್ಯಾತರ ಪದವಿ ಪೂರ್ವ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಹೊರಸಂಪನ್ಮೂಲ ಗೌರವ ಧನ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
  ಖಾಲಿ ಇರುವ ಹುದ್ದೆ, ವಿದ್ಯಾರ್ಹತೆ ವಿವರ ಇಂತಿದೆ. ಪ್ರಾಚಾರ್ಯರು- ಎಂಎ, ಎಂಎಸ್‌ಸಿ, ಬಿ.ಎಡ್ (೫ ವರ್ಷ ಅನುಭವ). ಕನ್ನಡ ಉಪನ್ಯಾಸಕರು-ಎಂಎ, ಬಿ.ಎಡ್, ಇಂಗ್ಲೀಷ್ ಉಪನ್ಯಾಸಕರು- ಎಂಎ, ಬಿ.ಎಡ್. ಗಣಿತ ಉಪನ್ಯಾಸಕರು- ಎಂಎಸ್‌ಸಿ, ಬಿ.ಎಡ್(ಗಣಿತ). ಭೌತಶಾಸ್ತ್ರ ಉಪನ್ಯಾಸಕರು- ಎಮ್‌ಎಸ್‌ಸಿ, ಬಿ.ಎಡ್(ಭೌತಶಾಸ್ತ್ರ), ಜೀವಶಾಸ್ತ್ರ ಉಪನ್ಯಾಸಕರು  ಎಂಎಸ್‌ಸಿ, ಬಿ.ಎಡ್(ಜೀವಶಾಸ್ತ್ರ), ರಸಾಯನಶಾಸ್ತ್ರ ಉಪನ್ಯಾಸಕರು ಎಂಎಸ್‌ಸಿ, ಬಿ.ಎಡ್(ರಸಾಯನಶಾಸ್ತ್ರ). ಗಣಕಯಂತ್ರ ಉಪನ್ಯಾಸಕರು-ಎಂಎಸ್‌ಸಿ, ಕಂಪ್ಯೂಟರ್ ಸೇರಿದಂತೆ ತಲಾ ಒಂದು ಹುದ್ದೆಗಳನ್ನು ಭರ್ತಿ ಮಾಡಲಾಗುವುದು. 
  ಆಸಕ್ತ ಅಭ್ಯರ್ಥಿಗಳು ತಮ್ಮ ದಾಖಲೆಗಳ ನಕಲು ಪ್ರತಿಗಳನ್ನು ಹಾಗೂ ವೈಯಕ್ತಿಕ ವಿವರಗಳೊಂದಿಗೆ ಮೇ.೨೯ ರ ಸಂಜೆ ೫ ಗಂಟೆಯೊಳಗಾಗಿ ಅರ್ಜಿಯನ್ನು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಅಥವಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್.ಬಿ ಅವರು   ತಿಳಿಸಿದ್ದಾರೆ. 
Please follow and like us:
error