ಬಿಳ್ಕೋಡುವ ಮತ್ತು ಸನ್ಮಾನ ಸಮಾರಂಭ.

 ನಗರದ ೭ನೆಯ ವಾರ್ಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಉರ್ದು) ದಿಡ್ಡಿಕೇರಿ ಓಣಿಯಲ್ಲಿ ೭ನೆಯ ತರಗತಿಯ ಮಕ್ಕಳ ಬಿಳ್ಕೋಡುವ ಮತ್ತು ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು

 ಜಾಹರಾಬೇಗಂವಹಿಸಿದ್ದರು.ಮುಖ್ಯಅತಿಥಿಗಳಾಗಿ  ಸಿ ಆರ್ ಪಿ ವಿಜಯಲಕ್ಷ್ಮಿ ಜಿಗಳೂರು, ಸಿರಸಪ್ಪನ ಮಠ ಶಾಲೆ ಮುಖ್ಯಗುರು ಶಾಂತಪ್ಪ ಗೋಶಿ, ಹಾಗೂ ದಿಡ್ಡಿಕೇರಿ ಕನ್ನಡ ಶಾಲೆ ಮುಖ್ಯಗುರುಗಳಾದ ಮೈಲಾರಗೌಡ ಹೊಸಮನಿ ಹಾಗೂ ಸಿದ್ದರಾಮನಗೌಡ ದೈಶಿ,  ಶರಣಪ್ಪ ಪಟ್ಟಣಶೇಟ್ಟಿ ,ರಂಗಪ್ಪ, ಯಲ್ಲಪ್ಪ ಚಿಜ್ಜೆರಿ, ರಾಜಮಹ್ಮದ,ಅಶೋಕ,ಸಿಪಾಯಿ, ನಾಸಿರಖಾನ, ಮತ್ತು ಶಿಕ್ಷಕಿಯರು ಇದ್ದರು.

ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ಸಿಆರ್‌ಪಿ ವಿಜಯಲಕ್ಷ್ಮಿ ಜಿಗಳೂರು ಮಾತನಾಡಿ ಮಕ್ಕಳು ಯಾವುದೆ ಕಾರಣಕ್ಕೂ ಶಾಲೆ ತಪ್ಪಿಸದೆ ಮುಂದಿನ ಹಂತದ ಶಿಕ್ಷಣವನ್ನು ಪೂರ್ತಿಗೋಳಿಸಿ, ಶಾಲೆಗೆ   ಮತ್ತು  ದಿಡ್ಡಿಕೇರಿ ಓಣಿಗೆ ಕೀರ್ತಿ ತರಲು ಹೇಳಿ ಶುಭಹಾರೈಸಿದರು.ಇನ್ನೋರ್ವ ಅತಿಥಿಯಾದ ಸಿದ್ದರಾಮಗೌಡ ದೈಶಿ ಮಕ್ಕಳ ಸಾಂಸೃತಿಕ ಕಾರ್ಯಕ್ರಮ ಮೆಚ್ಚಿ ಸರಕಾರಿ ಶಾಲೆ ಮಕ್ಕಳು ಸಹಿತ ಯಾರಿಗೇನು ಕಡಿಮೆ ಇಲ್ಲಾ ಪ್ರತಿಭೆಗಳನ್ನು ಗುರುತಿಸಿ ವಿವಿಧ ಕ್ಷೇತ್ರಗಳಿಗೆ ಅಣಿಗೋಳಿಸುವ ಕಾರ್ಯಮಾಡಬೇಕೆಂದು ಶುಭಹಾರೈಸಿದರು.
        ನಂತರದಲ್ಲಿ ದಿಡ್ಡಿಕೇರಿ ಉರ್ದು ಶಾಲೆಯ ಯಲ್ಲಪ್ಪ ಚಿಜ್ಜೆರಿ ನಿರ್ದೇಶಕಾರಾಗಿ ಹಾಗೂ ದಿಡ್ಡಿಕೇರಿ ಕನ್ನಡ ಶಾಲೆಯ ಮುಖ್ಯಗುರು ಮೈಲಾರಗೌಡ ಹೊಸಮನಿ  ಪ್ರಾಥಮಿಕ ಶಾಲಾಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದುದಕ್ಕೆ ಶಾಲೆಯಪರವಾಗಿ ಸನ್ಮಾನಿಸಲಾಹಿತು,ಸನ್ಮಾನಿತರ ಪರವಾಗಿ ಮಾತನಾಡಿದ ಅಧ್ಯಕ್ಷರು, ಪತ್ತಿನ ಸಂಘ ಇನ್ನಷ್ಟು ಆರ್ಥಿಕವಾಗಿ ಸದೃಡವಾಗಿ ಬೆಳೆದು, ಶಿಕ್ಷಕರ ಪತ್ತಿಗೆ ಯಾವುದೆ ಆಪತ್ತಾಗದಂತೆ ರಕ್ಷಣೆಮಾಡಿ ಸಹಕಾರಿಯಾಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.  ಕಾರ್ಯಕ್ರಮದ ಸ್ವಾಗತವನ್ನು ನಾಸಿರಖಾನ ಶಿಕ್ಷಕರು ಮಾಡಿದರೆ, ಯಲ್ಲಪ್ಪ ಚಿಜ್ಜೆನಿರೂಪಿಸಿದರು,ಕೊನೆಯಲ್ಲಿ ಸಿಪಾಯಿ ಶಿಕ್ಷಕರು ವಂದಿಸಿದರು.

Related posts

Leave a Comment