ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ಮುದ್ರಿಸಿಲು ಮುಖ್ಯಮಂತ್ರಿಗಳಿಗೆ ಮನವಿ

  ಕರ್ನಾಟಕದ ಬಡ ಅಭ್ಯರ್ಥಿಗಳು ನಾಗರೀಕ ಸೇವಾ (ಕೆಎಎಸ್ ಮತ್ತು ಐಎಎಸ್ ನಂಥ) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ಪೂರ್ವ ತಯಾರಿ ಮಾಡಿಕೊಳ್ಳಲು ಸಂಬಂಧಿಸಿದ ಸಂಪನ್ಮೂಲಗಳ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕಗಳು ಸಾಕಷ್ಟು ದುಬಾರಿ ಇರುವುದರಿಂದ ಬಡ ಅಭ್ಯರ್ಥಿಗಳು ಸದರಿ ಪುಸ್ತಕಗಳನ್ನು ಹೊಂದಿಸಿಕೊಳ್ಳಲು ಪರಿತಪಿಸುವಂತಾಗಿದೆ. ಆದ್ದರಿಂದ   ಕರ್ನಾಟಕ  ಸರ್ಕಾರ ಸದರಿ ಸಮಸ್ಯೆಗೆ ಸ್ಪಂದಿಸಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸದರಿ ಪುಸ್ತಕಗಳನ್ನು ಮುದ್ರಿಸಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಲ್ಲಿ ಲಭ್ಯವಾಗುವಂತೆ ಮಾಡಿದಲ್ಲಿ ಮಹದುಪಕಾರವಾಗುವುದು ಎಂದು  ವಿಜಯ ಅಮೃತರಾಜ್.   ರಾಜ್ಯಾಧ್ಯಕ್ಷರು ರಾಜ್ಯ ವಕೀಲರ ಸಾಹಿತ್ಯ ಪರಿಷತ್‌ ಕೋರಿದ್ದಾರೆ.                                                               

Leave a Reply