ಅಧಿಕಾರ ಸ್ವೀಕಾರ

: ಕೊಪ್ಪಳ ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕರಾಗಿ ಸುರೇಶ್ ವಿ. ಹಳ್ಯಾಳ ಅವರು ಬುಧವಾರದಂದು ಅಧಿಕಾರ ವಹಿಸಿಕೊಂಡರು. ಕೊಪ್ಪಳ ಜಿಲ್ಲಾ ಖಜಾನೆ ಇಲಾಖೆಯ ಜಿಲ್ಲಾ ಖಜನಾಧಿಕಾರಿ ಹುದ್ದೆಯನ್ನು ಉಪನಿರ್ದೇಶಕರ ಹುದ್ದೆಗೆ ಮೇಲ್ದರ್ಜೆಗೇರಿಸಲಾಗಿದ್ದು, ಇದೀಗ ನೂತನ ಉಪನಿರ್ದೇಶಕರಾಗಿ ಸುರೇಶ್ ವಿ. ಹಳ್ಯಾಳ ಅವರು ಅಧಿಕಾರ ವಹಿಸಿಕೊಂಡರು.  ಸುರೇಶ್ ಅವರು ಈ ಹಿಂದೆ, ಕೊಪ್ಪಳ, ಗದಗ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

Leave a Reply