ಫೆ.೧೨ : ಮರ್ದಾನೆಗೈಬ್ ದರ್ಗಾದ ಉರುಸೆ ಷರೀಫ್

ಕೊಪ್ಪಳ,ಫೆ.೧೧: ನಗರದ ಹೊರವಲದಲ್ಲಿ ಗುಡ್ಡಗಾಡು ಪ್ರದೇಶದಲ್ಲಿರುವ ಪುರಾತನ ಕಾಲದ ಐತಿಹಾಸಿಕ ಪರಂಪರೆಯುಳ್ಳ ಮತ್ತು ಹಿಂದೂ ಮುಸ್ಲಿಂ ಬಾಂಧವರ ಭಾವ್ಯಕತೆಯ ಪ್ರತೀಕ ಸರ್ಕಾರ ಸಯ್ಯದ್ ಷಾ ಹಜರತ್ ಮರ್ದಾನೆಗೈಬ್ ವಾಸಲಾನೇಹಖ್ ಖಲಂದರ್ ಸಹರ್ ವರದಿ ಮದನಿ (ಮರ್ದಾನೆಗೈಬ್) ದರ್ಗಾದ ಉರುಸೆ ಷರೀಫ್ ಪ್ರತಿವರ್ಷದಂತೆ ಈ ವರ್ಷವೂ ಸಹ ಸಡಗರ ಸಂಭ್ರಮದಿಂದ ಜರುಗಲಿದೆ. 
ಫೆ.೧೨ ರ ಗುರುವಾರ ರಾತ್ರಿ ಗಂಧವನ್ನು ಗೌರಿ ಅಂಗಳ ಓಣಿಯಲ್ಲಿರುವ ಹಜರತ್ ಮರ್ದಾನೆಗೈಬ್ ಮುಜಾವರ ಸಯ್ಯದ್ ಮಹೆಬೂಬ ಷರೀಫ್ ಇವರ ಮನೆಯಿಂದ ಗಂಧ, ಸಂಜೆ ೬ ಗಂಟೆಗೆ ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಸರದಾರ ಓಣಿ, ಕುರುಬರ ಓಣಿ ಮಾರ್ಗವಾಗಿ ದರ್ಗಾಕ್ಕೆ ರಾತ್ರಿ ಸುಮಾರು ೯ ಗಂಟೆಗೆ ತಲುಪಲಿದೆ. ಅಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಫೆ.೧೨ ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಉರುಸೆ ಷರೀಫ್ ನಿಮಿತ್ಯ ವಿವಿಧ ಧಾರ್ಮಿಕ, ಸಾಮಾಜಿಕ, ಪ್ರವಚನ ಕಾರ್ಯಕ್ರಮಗಳು ಜರುಗಲಿವೆ. ಫೆ.೧೩ ರ ಶುಕ್ರವಾರ ಮಧ್ಯಾಹ್ನ ೩ ಗಂಟೆಗೆ ದರ್ಗಾ ಆವರಣದಲ್ಲಿ ಬಹಿರಂಗ ಪ್ರವಚನ ಕಾರ್ಯಕ್ರಮ ಕೂಡ ಜರುಗಲಿದೆ. ಅದೇ ದಿನ ರಾತ್ರಿ ವೇಳೆ ಸುಮಾರು ೧೦.೩೦ ಕ್ಕೆ ಕೌವಾಲಿಯ ಕಾರ್ಯಕ್ರಮ ಜರುಗಲಿದೆ. ಇದರಲ್ಲಿ ಎಹಸಾನ ಹುಸೇನಖಾನ್ ವಾರಿಸಿ, ಆದೀಲ್ ಹುಸೇನ್‌ಖಾನ್ ವಾರಿಸಿ ಮತ್ತು ಹುಸೇನ ಗ್ರೂಪ್, ಸೂಫಿ ಖವ್ವಾಲ್ ಹೈದ್ರಾಬಾದ್ ಇವರ ನಡುವೆ ಖವ್ವಾಲಿ ಸ್ಪರ್ಧೆ ಜರುಗಲಿದೆ. ನಂತರ ಮರು ದಿನ ಫೆ.೧೪ ರ ಶನಿವಾರ ಬೆಳಗಿನಜಾವ ಜಿಯಾರತ್ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ. ಇದರಲ್ಲಿ ಹಿಂದೂ-ಮುಸ್ಲಿಂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ದರ್ಗಾ ಕಮೀಟಿ ಆಡಳಿತ ಮಂಡಳಿ ಪದಾಧಿಕಾರಿಗಳು  ಸರ್ವರನ್ನು ಸ್ವಾಗತಿಸಿದ್ದಾರೆ.
Please follow and like us:
error