fbpx

ಮಕ್ಕಳ ಪ್ರತಿಭೆ ಅರಳಲು ವೇದಿಕೆ ಅವಶ್ಯ:ಜಿ.ಎಚ್.ವೀರಣ್ಣ

ಕೊಪ್ಪಳ: ಮಕ್ಕಳ ಪ್ರತಿಭೆಗಳು ಅರಳಲು ಪ್ರತಿಭಾ ವೇದಿಕೆ ಅವಶ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಎಚ್.ವೀರಣ್ಣ ಹೇಳಿದರು.
     ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ಪೂರ್ವ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ,ಪ್ರತಿಯೊಂದು ಮಗುವಿನಲ್ಲಿ ಸೂಪ್ತವಾದ ವಿಭಿನ್ನ ರೀತಿಯ ಪ್ರತಿಭೆಗಳು ಅಡಗಿರುತ್ತವೆ.ಅಂಥಹ ಪ್ರತಿಭೆಗಳು ಅರಳಬೇಕಾದರೆ ಪ್ರತಿಭಾ ಕಾರಂಜಿಯಂತಹ ವೇದಿಕೆಗಳು ಅವಶ್ಯವಾಗಿವೆ.ಶೈಕ್ಷಣಿಕ ಪ್ರಗತಿಗೆ ಶಾಲೆಯ ಮುಖ್ಯ ಶಿಕ್ಷಕರು,ಶಿಕ್ಷಕರು ಹಾಗೂ ಸಮುದಾಯದವರ ಸಹಕಾರ ಅಗತ್ಯವಾಗಿದೆ.ಸ್ಪರ್ಧೆಯಲ್ಲಿ ಭಾಗವಹಿಸಿರುವ ಮಕ್ಕಳು ಸೋಲು-ಗೆಲುವುಗಳನ್ನು  ಸಮಾನವಾಗಿ ಸ್ವೀಕರಿಸಬೇಕು ಜೊ

ತೆಗೆ ಆಯ್ಕೆಯಾದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಕಿರ್ತಿಯನ್ನು ತರುವಂತೆ ಹಾರೈಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಮನಿ ಮಾತನಾಡಿ,ಮಕ್ಕಳಲ್ಲಿರುವ ಪ್ರತಿಭೆಗಳನ್ನು ಕೇವಲ ಒಂದು ದಿನದಲ್ಲಿ ಅಳೆಯಲು ಸಾಧ್ಯವಿಲ್ಲ ತರಗತಿಯ ಶಿಕ್ಷಕರು ಪ್ರತಿಯೊಂದು ಮಗುವಿನಲ್ಲಿರುವ ಕೌಸಲ್ಯವನ್ನು ಗುರುತಿಸುತ್ತಾರೆ.ಶಾಲೆಯಲ್ಲಿ ಮಗುವಿನ ಮನೋ ಸಾಮರ್ಥಕ್ಕೆ ತಕ್ಕಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹೇಳಿದರು.
    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಬಿ.ಮಂಜುನಾಥ ಕಾರ್ಯಕ್ರಮದ ಕುರಿತಾಗಿ ಮಾತನಾಡಿದರು.
  ಪೂರ್ವ ಕ್ಲಸ್ಟರಿನ ಸಿ.ಆರ್.ಪಿ.ಕೊಟ್ರೇಶ ಹೈದ್ರಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
   ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕೆ.ಪ್ರಕಾಶ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಜಿ.ಜಿ.ಎಂ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ವಿಠ್ಠಲದಾಸರ,ಕೊಟಗೇರಾ ಶಾಲೆಯ ಮುಖ್ಯೋಪಾಧ್ಯಾಯರಾದ ಬಸವನಗೌಡ,ಗವಿಸಿದ್ದೇಶ್ವರ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕರಾದ ಎಂ.ಎಂ.ಕೌದಿ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಗುರುರಾಜ ಕಟ್ಟಿ ನಿರೂಪಿಸಿದರು.
 ಶಿಕ್ಷಕಿ ಅಂಬಕ್ಕ ಪ್ರಾರ್ಥನೆಯನ್ನು ನೇರವೇರಿಸಿದರು.  ಶಿಕ್ಷಕರಾದ ನಾಗಪ್ಪ ನರಿ ಸ್ವಾಗತಿಸಿ,ವಿರುಪಾಕ್ಷಪ್ಪ ಬಾಗೋಡಿ ವಂದಿಸಿದರು. 
Please follow and like us:
error

Leave a Reply

error: Content is protected !!