೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಹಿರೇಮಠ

 ಹಿಟ್ನಾಳ ಹೋಬಳಿಯ ಮುನಿರಾಬಾದ್ ಡ್ಯಾಂ ನಲ್ಲಿ ೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಪ್ಪಳದ ಹಿರಿಯ ಸಾಹಿತಿಗಳಾದ ಶ್ರೀಮತಿ ಶಾಂತಾದೇವಿ ಹಿರೇಮಠ ಇವರನ್ನು ಪರಿಷತ್‌ನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸಮಿತಿ ವತಿಯಿಂದ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ತಾಲೂಕಾ ಕಸಾಪ ಅಧ್ಯಕ್ಷ ಶಿ.ಕಾ. ಬಡಿಗೇರ ತಿಳಿಸಿದ್ದಾರೆ. ಇಂದು ನಡೆದ ಸಭೆಯಲ್ಲಿ ತಾಲೂಕಾ ಕ.ಸಾ.ಪ. ಅಧ್ಯಕ್ಷ ಶಿ.ಕಾ. ಬಡಿಗೇರ,
ಗೌರವ ಕಾರ್ಯದರ್ಶಿ ಡಾ. ಪ್ರಕಾಶ ಬಳ್ಳಾರಿ, ಕಾರ್ಯಕಾರಿಣಿ ಸದಸ್ಯರಾದ ಬಸವರಾಜ ಪಾಟೀಲ, ಅರುಣಾ ನರೇಂದ್ರ, ಅನುಸೂಯಾ ಜಾಗೀರದಾರ, ಅಂಜನಾ ದೇವಿ ಕಲ್ಲೂರಕರ್, ಕಿಶನ್‌ಗೋಪಾಲ್ ಜಾಜಿ ಭಾಗವಹಿಸಿದ್ದರು.

Leave a Reply