You are here
Home > Koppal News > ಅಂಗವಿಕಲ ಮಹಿಳೆಯರ ರಕ್ಷಣೆಗಾಗಿ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಕೆ

ಅಂಗವಿಕಲ ಮಹಿಳೆಯರ ರಕ್ಷಣೆಗಾಗಿ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಕೆ

 ಕೊಪ್ಪಳ : ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ರಾಜ್ಯದ ಗೃಹ ಸಚಿವರಾದ ಕೆ.ಜೆ.ಜಾರ್ಜ್ ರವರಿಗೆ ವಿಧಾನಸೌಧದ ಅವರ ಕಛೇರಿಯಲ್ಲಿ sಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು. 
  ಈ ಸಂದರ್ಭದಲ್ಲಿ  ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅಂಗವಿಕಲ ಮಹಿಳೆಯರು ಅದರಲ್ಲೂ ವಿಶೇಷವಾಗಿ ಮಾತು ಬಾರದ , ಮಾನಸಿಕ ಅಸ್ವಸ್ಥ , ಅಂಧ ಮಹಿಳೆಯರ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಅತ್ಯಾಚಾರದಂತಹ ಪ್ರಕರಣದಲ್ಲಿ ಭಾಗಿಯಾಗಿರುವ ಹಾಗೂ ಅಂತಹ ಪ್ರಕರಣಕ್ಕೆ ಪ್ರಚೋದನೆಯನ್ನು ನೀಡುವವರ ವಿರುದ್ದ ಕಠಿಣ ಕ್ರಮವನ್ನು ಕೈಗೊಂಡಾಗ ಮಾತ್ರ ಅಂಗವಿಕಲ ಮಹಿಳೆಯರು ನೆಮ್ಮದಿಯಿಂದ ಜೀವನವನ್ನು ಸಾಗಿಸಲು ಸಾಧ್ಯವಾಗುವುದು. ಎಂದು ಗೃಹಸಚಿವರನ್ನು ಒತ್ತಾಯಸಿದರು.
     ಇದಕ್ಕೆ ಪ್ರತಿಕ್ರಯಿಸಿದ  ಗೃಹ ಸಚಿವರಾದ ಕೆ.ಜೆ.ಜಾರ್ಜ್ ರವರು ಅಂಗವಿಕಲ ಮಹಿಳೆಯರ ಮೇಲೆ ನಡೆಯುತ್ತಿರುವ ಪ್ರಕರಣಗಳು ಅಮಾನವೀಯವಾದುದು , ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಲು ಪೋಲೀಸ ಇಲಾಖೆಗೆ ಸೂಚನೆ ನೀಡುವುದರ ಜೊತೆಗೆ  ಅಂತಹ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡು ಅಂಗವಿಕಲ ಮಹಿಳೆಯರ ರಕ್ಷಣೆಗೆ ಬದ್ದ ಎಂದು ಭರವಸೆ ನೀಡಿದರು . ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ ಹಾಜರಿದ್ದರು. 

Leave a Reply

Top