ಕೊಪ್ಪಳದಲ್ಲಿ ಜು. ೩೧ ರಂದು ವಾಯುಪಡೆ ನೇಮಕಾತಿ ರ್‍ಯಾಲಿ

  ಭಾರತೀಯ ವಾಯುಪಡೆಯು ಗ್ರೂಪ್ “ಎಕ್ಸ್” ವಿಭಾಗದ ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ರ್‍ಯಾಲಿಯನ್ನು ಜುಲೈ ೩೧ ರಂದು ಕೊಪ್ಪಳದ  ಜಿಲ್ಲಾ ಕ್ರೀಡಾಂಗಣದಲ್ಲಿ (ಬ್ಯಾಡ್ಮಿಂಟನ್ ಕೋರ್ಟ್)ದಲ್ಲಿ ಆಯೋಜಿಸಲಾಗಿದೆ. 
೧ನೇ ಮೇ ೧೯೯೩ ರಿಂದ ೩೦ನೇ ನವೆಂಬರ್ ೧೯೯೬ರ ನಡುವೆ ಜನಿಸಿರುವ ಅವಿವಾಹಿತ ಪುರುಷ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಭಾಗವಹಿಸಬಹುದು. ದ್ವಿತೀಯ ಪಿಯುಸಿ ಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲೀಷ್ ವಿಷಯಗಳೊಂದಿಗೆ ಶೇ. ೫೦ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಹಾಗೂ ಪ್ರತ್ಯೇಕವಾಗಿ ಇಂಗ್ಲೀಷ್ ವಿಷಯದಲ್ಲಿ ೫೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೋಮಾ (ಮೆಕ್ಯಾನಿಕಲ್, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಸೈನ್ಸ್, ಇನ್ಸಟ್ರುಮೆಂಟೇಷನ್ ಟೆಕ್ನಾಲಾಜಿ, ಇನ್‌ಫಾರ್ಮೇಷನ್ ಟೆಕ್ನಾಲಾಜಿ) ರಲ್ಲಿ ಶೇ. ೫೦ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು ಹಾಗೂ ಡಿಪ್ಲೋಮಾ ಅಥವಾ ಎಸ್.ಎಸ್.ಎಲ್.ಸಿ. ಅಥವಾ ದ್ವಿತೀಯ ಪಿಯುಸಿ ಯಲ್ಲಿ ಇಂಗ್ಲೀಷ್ ವಿಷಯದಲ್ಲಿ ೫೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅರ್ಹ ಅಭ್ಯರ್ಥಿಗಳು ಎಲ್ಲ ಮೂಲ ಅಂಕಪಟ್ಟಿಗಳೊಂದಿಗೆ (ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮಾ) ಮತ್ತು ಅವುಗಳ ಮೂರು ಸೆಟ್ ಜೆರಾಕ್ಸ್ ಪ್ರತಿಗಳನ್ನು ಹಾಗೂ ಇತ್ತೀಚಿನ ೭ ಪಾಸ್‌ಪೋರ್ಟ ಅಳತೆಯ ಭಾವಚಿತ್ರ (ಕಲರ್) ಗಳೊಂದಿಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಾಯುಪಡೆಯ ವೆಬ್‌ಸೈಟ್ www.indianairforce.nic.in  ಅಥವಾ ಇ-ಮೇಲ್  co7asc@dataone.in  ಅಥವಾ ದೂರವಾಣಿ ಸಂಖ್ಯೆ ೦೮೦-೨೫೫೯೨೧೯೯ ಅಥವಾ ಖುದ್ದಾಗಿ ನಂ.೭, ಏರ್‌ಮೆನ್ ಸೆಲೆಕ್ಷನ್ ಸೆಂಟರ್ ನಂ.೧, ಕಬ್ಬನ್ ರಸ್ತೆ, ಬೆಂಗಳೂರು-೫೬೦ ೦೦೧ರಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ .
Please follow and like us:
error