ಸ್ಟೈಫಂಡರಿ ಪದವಿಧರ ನೌಕರರ ಸಭೆ.

ಕೊಪ್ಪಳ : ಕರ್ನಾಟಕ ರಾಜ್ಯ ಮಿತವೇತನ ಪದವೀಧರ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘ (ರಿ) ಬೆಂಗಳೂರು  ಜಿಲ್ಲಾ ಘಟಕ ಕೊಪ್ಪಳ ಇವರ ಕರೆಯ ಮೇರಿಗೆ ಕೊಪ್ಪಳ ಜಿಲ್ಲಾ ಸಂಘವು ದಿನಾಂಕ: ೦೩-೦೮-೨೦೧೫ ನೇ ಸೋಮವಾರ ಮಧ್ಯಾಹ್ನ ೩-೦೦ ಗಂಟೆಗೆ ತಹಶೀಲ್ ಕಛೇರಿ ಸಮೀಪದ ಈಶ್ವರ ದೇವಸ್ಥಾನದ ಸಾರ್ವಜನಿಕ ಉದ್ಯಾನವನದಲ್ಲಿ ಸಭೆಯನ್ನು ಕರೆಯಲಾಗಿದೆ. ಮಿತವೇತನ ಪದವಿಧರರಿಗೆ ಪೂರ್ಣ ಪ್ರಮಾಣದ ಸೇವಾ ಸೌಲಭ್ಯವನ್ನು ಸರ್ಕಾರವು ಕೊಡಬೇಕೆಂದು ಒತ್ತಾಯಿಸಿ ರಾಜ್ಯ ಸಂಘವು ಹೋರಾಟ ನಡೆಸಿದ್ದು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಗುವುದು ಕಾರಣ ಜಿಲ್ಲೆಯ ಎಲ್ಲಾ ನಿವೃತ್ತ ಹಾಗೂ ಕಾರ್ಯನಿರ್ವಹಿಸುತ್ತಿರುವ ನೌಕರರು ತಪ್ಪದೇ ಹಾಜರಾಗಲು ಕೋರಲಾಗಿದೆ ಎಂದು  ಆರ್.ಆರ್. ಮುಂಡರಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿಬೇಕಾದ ದೂರವಾಣಿ ಸಂಖ್ಯೆ: ೭೪೦೬೯೬೧೧೮೯, ೯೬೧೧೯೬೭೫೪೪.
Please follow and like us:

Related posts

Leave a Comment