ಕೊಪ್ಪಳ, ಡಿ.೧೬ (ಕ
ವಾ) ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಅಡಿ ಜಿಲ್ಲಾ ಮಟ್ಟದ ಕುಂದುಕೊರತೆ
ನಿವಾರಣೆ ಸಮಿತಿ ಸಭೆಯನ್ನು ಡಿ.೨೨ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ
ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು
ಸಭೆಯ ಅಧ್ಯಕ್ಷತೆ ವಹಿಸುವರು. ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ತಪ್ಪದೆ ಹಾಜರಾಗುವಂತೆ
ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.
ಆಕಾಶವಾಣಿ ಕ್ವಿಜ್ ವೀರಶೈವ ಕಾಲೇಜು ಪ್ರಥಮ

ಕೊಪ್ಪಳ
ಡಿ. ೧೬ (ಕ ವಾ) ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕಳೆದ ಡಿ. ೧೫
ಬುಧವಾರದಂದು ಆಕಾಶವಾಣಿ ಹೊಸಪೇಟೆ ಕೇಂದ್ರದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಜೀವನ,
ಸಾಧನೆ, ಭಾರತದ ಸಂವಿಧಾನ, ಹಾಗೂ ಸಂವಿಧಾನ ರಚನಾ ಸಭೆಗಳು ಎಂಬ ವಿಷಯದ ಕುರಿತು ಬಳ್ಳಾರಿ
ಹಾಗೂ ಕೊಪ್ಪಳ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಯುವ ರಸಪ್ರಶ್ನೆ
ಸ್ಪರ್ಧೆಯಲ್ಲಿ, ಬಳ್ಳಾರಿಯ ವೀರಶೈವ ಕಾಲೇಜಿನ ವಿದ್ಯಾರ್ಥಿಗಳಾದ ಸೈಯದ್ ಸಾದಿಕ್ ಹುಸೇನ್
ಹಾಗೂ ಶಿಫಾ ಅಲಿ ಪ್ರಥಮ ಸ್ಥಾನಗಳಿಸಿದ್ದಾರೆ.
ಈ ಮೂಲಕ ಧಾರವಾಡ ಆಕಾಶವಾಣಿ
ಕೇಂದ್ರದಲ್ಲಿ ಜನವರಿ ೪ ರಂದು ನಡೆಯುವ ರಾಜ್ಯ ಮಟ್ಟದ ಆಕಾಶವಾಣಿ ಯುವ ರಸಪ್ರಶ್ನೆ
ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಸರ್ಕಾರಿ ಪ.ಪೂ. ಕಾಲೇಜು
ಚಿತ್ತವಾಡಗಿ, ಹೊಸಪೇಟೆ ತಂಡ ರನ್ನರ್ ಆಪ್ ಸ್ಥಾನ ಗಳಿಸಿತು. ಕೊಪ್ಪಳ ಮತ್ತು ಬಳ್ಳಾರಿ
ಜಿಲ್ಲೆಗಳ ವಿವಿಧ ೧೬ ಕಾಲೇಜುಗಳಿಂದ ಆಗಮಿಸಿದ್ದ ೩೨ ವಿದ್ಯಾರ್ಥಿಗಳು ರಸಪ್ರಶ್ನೆ
ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭೀಮೇಶ ಯರಡೋಣ, ಹಾಗೂ ಶರಣಯ್ಯ ಅಬ್ಬಿಗೇರಿಮಠ ಅವರು
ಕ್ವಿಜ್ ಮಾಸ್ಟರುಗಳಾಗಿದ್ದರು, ಪ್ರಸಾರ ನಿರ್ವಾಹಕ ಮಂಜುನಾಥ ಡೊಳ್ಳಿನ ನಿರ್ವಹಿಸಿದರು.
ಕಾರ್ಯಕ್ರಮ ಮುಖ್ಯಸ್ಥರಾದ ಡಾ|| ಅನುರಾಧ ಕಟ್ಟಿ ಹಾಗೂ ಕಾರ್ಯಕ್ರಮ ನಿರ್ವಾಹಕ ಅರುಣ್
ನಾಯಕ್ ಅವರು ಭಾಗವಹಿಸಿದ ತಂಡಗಳಿಗೆ ಬಹುಮಾನ ವಿತರಿಸಿದರು.

Please follow and like us: