ಸಹಕಾರಿ ಯುನಿಯನ್‌ಗಳ ಬಲಪಡಿಸಲು ಪ್ರಮಾಣಿಕ ಪ್ರಯತ್ನ-ಶೇಖರಗೌಡ ಮಾಲಿಪಾಟೀಲ್.

ಕೊಪ್ಪಳ-09- ರಾಜ್ಯದ ಎಲ್ಲಾ ಜಿಲ್ಲೆಗಳ ಸಹಕಾರಿ ಯುನಿಯನ್‌ಗಳನ್ನು ಬಲಪಡಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು.
ಅವರು ಬುಧುವಾರದಂದು ನಗರದ ಶ್ರೀಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್‌ನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಎಂಟು ಸಹಕಾರಿ ತರಬೇತಿ ಸಂಸ್ಥೆಗಳಿವೆ ಅವುಗಳಿಗೆ ಇನ್ನು ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿ ಪಡಿಸಲಾಗುವುದು, ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಈ ತರಬೇತಿ ಕಾಲೇಜ್ ಕಲುಬುರಗಿಯಲ್ಲಿದೆ, ಕೊ

ಪ್ಪಳ ಜಿಲ್ಲೆಗೆ ಸಹಕಾರಿ ತರಬೇತಿ ಕಾಲೇಜ್ ತರಲು ಪ್ರಯತ್ನಿಸುವೆ ಎಂದ ಅವರು ಸಹಕಾರ ತರಬೇತಿಯನ್ನು ಪಡೆದುಕೊಂಡವರನ್ನು ಸಹಕಾರಿ ಸಂಸ್ಥೆಗಳಲ್ಲಿ ನೇಮಕಾತಿಗೆ ಪರಿಗಣಿಸಲು ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಸಹಕಾರ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್,ಜಿಲ್ಲಾ ಸಹಕಾರಿ ಯುನಿಯನ್ ಉಪಾಧ್ಯಕ್ಷ ಹನುಮಪ್ಪ ಉಪ್ಪಾರ, ನಿರ್ದೇಶಕರಾದ ಶಕುಂತಲಾ ಹಾಲಯ್ಯ ಹುಡೇಜಾಲಿ, ನೀಲಕಂಠಯ್ಯ ಹಿರೇಮಠ, ಗವಿಸಿದ್ದೇಶ ಹುಡೇಜಾಲಿ, ತಿರುಳ್ಗನ್ನಡ ಕ್ರಿಯಾ ಸಮಿತಿಯ ರಾಜಶೇಖರ ಅಂಗಡಿ,ಸಹಕಾರಿ ಯುನಿಯನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಕಾಟ್ರಳ್ಳಿ, ವ್ಯವಸ್ಥಾಪಕ ರಾಜಶೇಖರ ಹೊಸಮನಿ ಸಿಬ್ಬಂದಿ ಮಲ್ಲಯ್ಯ ಮತ್ತೀತರರು ಉಪಸ್ಥಿತರಿದ್ದರು.

Please follow and like us:
error