ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರಮಹತ್ವದ್ದಾಗಿದೆ : ಮೋಹನ್ ಪ್ರಸಾದ್

ಕೊಪ್ಪಳ,ಫೆ,೨೬: ಇಂದಿನ ಮಕ್ಕಳೆ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಮಕ್ಕಳ ಮೂದಿನ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಅವರಷ್ಟೇ ಮಹತ್ವದ ಜವಾಬ್ದಾರಿ ಪಾಲಕರ ಮೇಲೆಕೂಡಾ ಇದೇ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಮೋಹನ್‌ಪ್ರಸಾದ ಹೇಳಿದರು.
   ಅವರು ನಗರದ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಪಬ್ಲಿಕ್ ಶಾಲೆಯಲ್ಲಿ ಬುಧುವಾರ ಸಂಜೆ ಏರ್ಪಡಿಸಿದ ೧೫ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜೊತೆಗೆ ಅವರ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಮಾರ್ಗದರ್ಶನ ನೀಡಬೇಕೆಂದರು.
  ಮುಂದುವರೆದು ಮಾತನಾಡಿದ ಅವರು ಮಕ್ಕಳ ರಕ್ಷಣೆ ಮಕ್ಕಳಬಗ್ಗೆ ಹೆಚ್ಚಿನ ಕಾಳಜಿಗಾಗಿ ಶಿಕ್ಷಣದಲ್ಲಿ ಮಕ್ಕಳ ಅಭಿರುಚಿಗೆ ಅನುಗುಣವಾಗಿ ಅವರನ್ನು ಪ್ರೇರೇಪಿಸಬೇಕು ಅವರನ್ನು ಉತ್ತಮ ಪ್ರಜೆಯನ್ನಾಗಿ ಮಾಡುವ ಹೊಣೆಗಾರಿಕೆ ಶಿಕ್ಷಕರ ಮತ್ತು ಪಾಲಕರಮೇಲೆ ಇದೆ ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ ಅವರ ಭವಿಷ್ಯ ಉಜ್ವಲಗೊಳಿಸಬೇಕೆಂದು ಕೊಪ್ಪಳ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಮೋಹನ್‌ಪ್ರಸಾದ ಹೇಳಿದರು.
  ವಿಶೇಷ ಆಮಂತ್ರಿತರಾಗಿ ಕಿಶೋರಿ ಪೆಟ್ರೋಲ್‌ಬಂಕಿನ ಪ್ರೋ. ಶ್ರೀಮತಿ ಕಿಶೋರಿ ಬಸವರಾಜ ಗೌಡ ಪಾಲ್ಗೊಂಡು ಮಾತನಾಡಿದರು. ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್ ಬಹುಮಾನ ವಿತರಣೆ ಮಾಡಿದರು. ಮುಖ್ಯಅತಿಥಿಗಳಾಗಿ ನಗರಸಭೆಯ ಸದಸ್ಯರಾದ ಅಮ್ಜದ್ ಪಟೇಲ್, ಮಲ್ಲಪ್ಪ ಕವಲೂರ್, ಪತ್ರಕರ್ತರಾದ ಜಿ.ಎಸ್.ಗೋನಾಳ. ಎನ್.ಎಂ.ದೊಡ್ಡಮನಿ, ಯುವ ಸಾಹಿತಿ ಮಹೆಬೂಬ್ ಮುಲ್ಲಾ ಹನುಮಸಾಗರ, ಮೌಲಾನಾ ಆದಿಲ್ ಖಾದ್ರಿ ಸಾಲಗುಂದಿ, ಮಕ್ಬುಲ್ ಮನಿಯಾg ಪಾಲ್ಗೊಂಡಿದ್ದು ಸಂಸ್ಥೆಯ ಅಧ್ಯಕ್ಷ ಎಂ.ಪಾಷಾ ಕಾಟನ್ ಅಧ್ಯಕ್ಷತೆ ವಹಿಸಿದ್ದರು.
    ಸಂಸ್ಥೆಯ ಪದಾಧಿಕಾರಿಗಳಾದ ಎಂ.ಸಾದಿಕ್‌ಅಲಿ, ಸಯ್ಯದ್ ನಜೀರ್ ಅಹಮ್ಮದ್, ಅಬ್ದುಲ್ ಅಜೀಜ್, ಎಂಡಿ.ಆಸೀಫ್ ಕರ್ಕಿಹಳ್ಳಿ, ಸಯ್ಯದ ಇಮಾಮ್ ಹುಸೇನ್ ಸಿಂದೋಗಿ, ಎಂ.ಡಿ.ಜಹೀರ ಅಲಿ, ಅಲ್ಲಾಭಕ್ಷಿ ಇಳಿಯಾಳ, ಆಡಳಿತಾಧಿಕಾರಿ ಸಯ್ಯದ್ ಯಜದಾನಿ ಪಾಷಾ ಖಾದ್ರಿ, ಮುಖ್ಯ ಶಿಕ್ಷಕಿ ನಯನಾಜ್ ಬೇಗಂ ಹೊಸಮನಿ ಸೇರಿದಂತೆ ಅನೇಕರು ಕಾರ್ಯಕಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜನ ಮನ ರಂಜಿಸಿತು.  
Please follow and like us:
error