ಜಾರಕಿಹೊಳಿ ರಾಜೀನಾಮೆ ಹಿಂದಕ್ಕೆ ಪಡೆಯುತ್ತಾರೆ- ಸಿಎಂ ಸಿದ್ದರಾಮಯ್ಯ

ಸತೀಶ ಜಾರಕಿಹೊಳಿ ರಾಜೀನಾಮೆ ವಾಪಸ್ ಪಡೆಯುತ್ತಾರೆ. ಅವರ ಮನವೊಲಿಸಲಾಗುವುದು. ಇವತ್ತು ಬೇಟಿಯಾಗಿ ಮಾತನಾಡುತ್ತೇವೆ. ನನ್ನನ್ನು ಡಿಸಿಎಂ ಮಾಡಿದ್ದು ದೇವೆಗೌಡ ಅಲ್ಲ. ಅಂದಿನ ಶಾಸಕರು. ದೇವೆಗೌಡರು ಬರೀ ಸುಳ್ಳು ಹೇಳುತ್ತಾರೆ. ಅಂಬರೀಶ್ ಮತ್ತು ನನ್ನ ನಡುವೆ ಯಾವುದೇ ಮಾತಿನ ಜಟಾಪಟಿಯಾಗಿಲ್ಲ. ಜೆಡಿಎಸ್ ಪಕ್ಷದ ನಿವೇಶನ ಕಚೇರಿ ಜಾಗೆಗೂ ನನಗೂ ಸಂಬಂಧವಿಲ್ಲ- ಮುಖ್ಯಮಂತ್ರಿ ಸಿದ್ದರಾಮಯ್ಯ. ಇಂದು ಬೆಳಿಗ್ಗೆ ಮಾಜಿ ಸಚಿವ  ಅಮರೇಗೌಡ ಬಯ್ಯಾಪೂರರ ಮಕ್ಕಳ ಮದುವೆ ಸಂಭ್ರಮದಲ್ಲಿ  ಪಾಲ್ಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿಗಳು ಇಂದು ಬಸಾಪೂರ್ ಎರಪೋರ್ಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದ ಮಾತುಗಳಿವು.  ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ , ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. 

Leave a Reply