ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶ

‘ಗಣಿ ದೇಣಿಗೆ ’ ಪ್ರಕರಣ: 
  ‘ಗಣಿ ದೇಣಿಗೆ’ ಹಾಗೂ ಕಾನೂನು ಬಾಹಿರ ಭೂಸ್ವಾಧೀನ ಪ್ರಕಿಯೆ ಅಧಿಸೂಚನೆ ರದ್ದು ಹಗರಣ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.
‘ಗಣಿ ದೇಣಿಗೆ’ ಹಾಗೂ ಕಾನೂನು ಬಾಹಿರ ಭೂಸ್ವಾಧೀನ ಪ್ರಕಿಯೆ ಅಧಿಸೂಚನೆ ರದ್ದು ಹಗರಣ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕೆಂದು ಕೋರಿ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಮೇ 4ಕ್ಕೆ ಪೂರ್ಣಗೊಳಿಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ಹಾಗೂ ಅಫ್ತಾಬ್ ಆಲಂ, ಸ್ವತಂತ್ರ ಕುಮಾರ್‌ರನ್ನೊಳಗೊಂಡ ತ್ರಿಸದಸ್ಯ ಅರಣ್ಯಪೀಠ, ಇಂದು ತೀರ್ಪು ಪ್ರಕಟಿಸಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿ ಆದೇಶ ನೀಡಿತು.
ಅಕ್ರಮ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ‘ಜಿಂದಾಲ್ ಸ್ಟೀಲ್ ವರ್ಕ್’ ಮತ್ತು ‘ಸೌತ್ ವೆಸ್ಟ್ ಮೈನಿಂಗ್ ಕಂಪೆನಿ’ಯಿಂದ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರಾದ ಬಿ.ವೈ.ರಾಘವೇಂದ್ರ, ಬಿ.ವೈ. ವಿಜಯೇಂದ್ರ ಹಾಗೂ ಸೋಹನ್ ಕುಮಾರ್ ಒಡೆತನದ ‘ಪ್ರೇರಣಾ ಶಿಕ್ಷಣ ಟ್ರಸ್ಟ್’ ಹಾಗೂ ‘ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್‌’ ದೇಣಿಗೆ ಪಡೆದ ಆರೋಪದ ಕುರಿತು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಥಾಪನೆ ಆದಾಗಿನಿಂದ ಬಡಾವಣೆ ನಿರ್ಮಿಸಲು ವಶಪಡಿಸಿಕೊಂಡ ಭೂಮಿ, ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟ ಭೂಮಿ ಕುರಿತು ಸಿಬಿಐಯಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿ ಸಿಇಸಿ ಎ.20ರಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
Please follow and like us:
error