ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ದೂರು ಸಲ್ಲಿಸಲು ಸಲಹೆ .

ಕೊಪ್ಪಳ, ಏ.೨೭ (ಕರ್ನಾಟಕ ವಾರ್ತೆ) : ಕೊಪ್ಪಳ ನಗರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಏ.೧೧ ರಿಂದ ಆರಂಭಗೊಂಡಿದ್ದು, ಏ.೩೦ ರಂದು ಮುಕ್ತಾಯಗೊಳ್ಳಲಿದೆ. ಗಣತಿಯಲ್ಲಿ ಯಾರನ್ನೂ ಕೈಬಿಡದಂತೆ ಈಗಾಗಲೇ ಗಣತಿದಾರರಿಗೆ ಸೂಚಿಸಲಾಗಿದೆ. ಆಕಸ್ಮಿಕವಾಗಿ ಯಾವುದೇ ಗಣತಿದಾರರು ನಿಮ್ಮ ಮನೆಗೆ ಭೇಟಿ ನೀಡದಿದ್ದಲ್ಲಿ ಅಥವಾ ಗಣತಿಯಾಗದಿದ್ದಲ್ಲಿ ಏ.೩೦ ರೊಳಗಾಗಿ ದೂರವಾಣಿ ಸಂಖ್ಯೆ ೦೮೫೩೯-೨೩೦೩೯೦, ೨೩೦೧೯೨ ಅಥವಾ ೯೯೮೦೨೦೮೭೭೧ ಮೂಲಕ ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ, ದೂರು ಸಲ್ಲಿಸಬಹುದಾಗಿದೆ.

Leave a Reply