ಸಿರಾಜ್ ಬಿಸರಳ್ಳಿಗೆ ಗವಿಶ್ರೀಗಳಿಂದ ಸನ್ಮಾನ

ಕೊಪ್ಪಳ : ಅಂತರಾಷ್ಟ್ರೀಯ ಮಂಥನ್ ಮಾಧ್ಯಮ ಪ್ರಶಸ್ತಿ ಪಡೆದಿರುವ ಕನ್ನಡನೆಟ್ ಡಾಟ್ ಕಾಂ ಪತ್ರಿಕೆಯ ಸಂಪಾದಕ ಸಿರಾಜ್ ಬಿಸರಳ್ಳಿಗೆ ಕೊಪ್ಪಳ ತಾಲೂಕಾ ಛಾಯಾಗ್ರಾಹಕರ ಸಂಘದವತಿಯಿಂದ ಗವಿಮಠದಲ್ಲಿ ಆತ್ಮೀಯ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
           ಬೆಳಕಿನೆಡೆಗೆ ಕಾರ‍್ಯಕ್ರಮದ ನಂತರ ನಡೆದ ಸರಳ ಸಮಾರಂಭದಲ್ಲಿ  ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದರು. ಕನ್ನಡನೆಟ್ ಡಾಟ್ ಕಾಂನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ  ಕೊಪ್ಪಳ ತಾಲೂಕಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಗೋವಿಂದರಾವ್ ಪದಕಿ, ಉಪಾಧ್ಯಕ್ಷ- ಕನಕೂಸಾ ದಲಬಂಜನ, ಕಾರ‍್ಯದರ್ಶಿ ವಿಜಯ ವಸ್ತ್ರದ, ಇಮಾಮಸಾಬ ಬಿಜಾಪೂರ,ಅಜಂತಾ ಗೌಡ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply