ಉದ್ದಿಮೆ ಪರವಾನಿಗೆ ಶುಲ್ಕ ಪರಿಷ್ಕೃತ :ಪಾವತಿಗೆ ಸೂಚನೆ

ಕೊಪ್ಪಳ ಡಿ.೨೧ ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಉದ್ದಿಮೆಗಳ ಸನದು ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಪರಿಷ್ಕೃತ ದರದಂತೆ ಶುಲ್ಕ ಪಾವತಿಸುವಂತೆ ನಗರಸಭೆ ಪೌರಾಯುಕ್ತೆ ಬಿ.ಎಂ.ಅಶ್ವಿನಿ ಅವರು ತಿಳಿಸಿದ್ದಾರೆ.
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಉದ್ದಿಮೆಗಳ ಸನದು ಶುಲ್ಕವನ್ನು ಪರಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದ್ದು,  ಈಗಾಗಲೇ ನಗರಸಭೆಯ ಸೂಚನಾ ಫಲಕದಲ್ಲಿ ವಿವಿಧ ಉದ್ಯಮಗಳ ಸನದು ಶುಲ್ಕಗಳ ಪರಿಷ್ಕೃತ ದರಪಟ್ಟಿಯನ್ನು ಪ್ರಕಟಿಸಲಾಗಿದೆ. ಸಂಬಂಧಿತ ಉದ್ಯಮದಾರರು ಈ ಪರಿಷ್ಕೃತ ದರಗಳನುಸಾರ ಶುಲ್ಕ ಭರಿಸಿ, ಸನದು ಪಡೆಯಲು/ನವೀಕರಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತರು   ತಿಳಿಸಿದ್ದಾರೆ.

Leave a Reply