You are here
Home > Koppal News > ಬಯೋಮೇಟ್ರಿಕ್ ಕಾರ್ಡಗಳನ್ನು ವಿತರಿಸಲು ಒಂದು ದಿನದ ಧರಣಿ ಸತ್ಯಾಗ್ರಹ

ಬಯೋಮೇಟ್ರಿಕ್ ಕಾರ್ಡಗಳನ್ನು ವಿತರಿಸಲು ಒಂದು ದಿನದ ಧರಣಿ ಸತ್ಯಾಗ್ರಹ

ಸರ್ವೆ ನಂ ೪೩೮ರ ಆಶ್ರಯ ಬಡಾವಣೆ ಮನೆಗಳನ್ನು ಹಾಗೂ ಬಯೋಮೇಟ್ರಿಕ್ ಕಾರ್ಡಗಳನ್ನು ವಿತರಿಸಬೇಕೆಂದು ನಗರ ಸಭೆಯ ಮುಂದೆ ಸರ್ವೆ ನಂ ೪೩೮ರ ಆಶ್ರಯ ಬಡಾವಣೆ ಅರ್ಹ ಫಲಾನುಭವಿಗಳ ಹೋರಾಟ ಸಮಿತಿ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡು ನಗರಸಭೆ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕರಾದ ಶಿವರುದ್ರಯ್ಯ ಹಿರೇಮಠ ಗೌರವಧ್ಯಕ್ಷರಾದ  ಹನುಮಂತಪ್ಪ ಮ್ಯಾಗಳಮನಿ, ಕಾರ್ಯಧ್ಯಕ್ಷರಾದ ನಾಸಿರಹುಸೇನ ತೆಗ್ಗಿನಕೇರಿ, ಉಪಾಧ್ಯಕ್ಷರಾದ ಮೈಲಪ್ಪ ಬಿಸರಳ್ಳಿ, ಪ್ರಧಾನಕಾರ್ಯದರ್ಶಿಯಾದ, ಮಲ್ಲಿಕಾರ್ಜುನ ಪೂಜಾರ, ಸಹಕಾರ್ಯದರ್ಶಿಗಳಾದ ರೇಣುಕಾ ಇಟಗಿ, ಸ್ವಾತಿ ಕರೋಸಿ, ಹಾಗೂ ೧೪೫ ಜನ ಅರ್ಹ ಫಲಾನುಭವಿಗಳು ಹಾಜರಿದ್ದರು.

Leave a Reply

Top