ದತ್ತಿ ಪ್ರಶಸ್ತಿಗೆ ಕಾವ್ಯಕೃತಿಗಳ ಆಹ್ವಾನ.

ಕೊಪ್ಪಳ, ಜು.೦೯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ತಮ್ಮ ತಂದೆ ಅಮರಪ್ಪ ಅಮರಗುಂಡಪ್ಪ ಅರಳಿ ಸ್ಮರಣಾರ್ಥ ೨೫ ಸಾವಿರ ರೂ.ಗಳ ದತ್ತಿ ಸ್ಥಾಪಿಸಿದ್ದು, ಕೊಪ್ಪಳ ಜಿಲ್ಲೆಯ ಬರಹಗಾರರ ಕಾವ್ಯಕೃತಿಗಳಿಗೆ ಪ್ರಶಸ್ತಿ ನೀಡಲು ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಗೆ ಸಲ್ಲಿಸಬಯಸುವ ಕಾವ್ಯಕೃತಿಗಳು ೨೦೧೪ ರಲ್ಲಿ ಪ್ರಕಟಗೊಂಡಿರಬೇಕು. ಆಸಕ್ತರು ತಮ್ಮ ಮೂರು ಕೃತಿಗಳನ್ನು ಅಕ್ಬರ್ ಸಿ.ಕಾಲಿಮಿರ್ಚಿ, ಗೌರವ ಕಾರ್ಯದರ್ಶಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಪ್ಪಳ, ಸಾ||ಭಾಗ್ಯನಗರ, ತಾ||ಜಿ||ಕೊಪ್ಪಳ ಇವರಿಗೆ ಜುಲೈ.೨೧ ರೊಳಗಾಗಿ ಕಳುಹಿಸಿಕೊಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೦೦೮೫೮೫೪೮, ೯೭೩೧೩೨೭೮೨೯ ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ನಿಂಗೋಜಿ ತಿಳಿಸಿದ್ದಾರೆ.

Related posts

Leave a Comment