fbpx

ರೈತ ಬದುಕು ಬೇಸಾಯ ಜಿಲ್ಲೆಯ ೨೦೦ ಗ್ರಾಮಗಳಲ್ಲಿ ಜಾಗೃತಿ ಜಾಥಾ ಸಂಚಾರ.

ಕೊಪ್ಪಳ ಆ.
೦೫ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು, ರೈತರಲ್ಲಿ
ಆತ್ಮವಿಶ್ವಾಸ ಮೂಡಿಸುವುದು, ಆತ್ಮಸ್ಥೈರ್ಯ ತುಂಬುವಂತೆ ಮಾಡುವ ನಿಟ್ಟಿನಲ್ಲಿ ವಾರ್ತಾ
ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೃಷಿ ಇಲಾಖೆ, ತೋಟಗಾರಿಕೆ, ಸಹಕಾರ ಮತ್ತು ಜಿಲ್ಲಾ
ಪಂಚಾಯತಿಯ ಸಹಯೋಗದೊಂದಿಗೆ ರೈತರ ಬದುಕು ಬೇಸಾಯ- ರೈತ ಬಂಧುಗಳಿಗೆ ಸಾಂತ್ವನ ಜಾಗೃತಿ
ಜಾಥಾ ಕಾರ್ಯಕ್ರಮವನ್ನು ಆ. ೦೪ ರಿಂದ ಪ್ರಾರಂಭಿಸಿದ್ದು, ಆ. ೨೩ ರವರೆಗೆ ಒಟ್ಟು ೨೦
ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಸಾಲಬಾಧೆಯಿಂದ ಹೊರಬರಲಾಗದೆ, ಮಾನಸಿಕ
ಖಿನ್ನತೆಗೆ ಒಳಗಾಗುವ ರೈತರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಅವರಲ್ಲಿ ಆತ್ಮ ವಿಶ್ವಾಸ
ತುಂಬುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿದೆ.  ರೈತರಿಗೆ ಸಾಲ ನೀಡಿದ
ಲೇವಾದೇವಿಗಾರರು, ಬ್ಯಾಂಕುಗಳು ಸೇರಿದಂತೆ ಯಾರಿಂದಲಾದರೂ ಒತ್ತಡವಿದ್ದಲ್ಲಿ ಸಹಾಯಕ್ಕೆ
ಮತ್ತು ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ ೧೦೪ ಕ್ಕೆ ಅಥವಾ ರೈತರ ಸಹಾಯವಾಣಿ
೧೮೦೦-೪೨೫-೩೫೫೩ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದಾಗಿದೆ.  ರೈತರ ಬದುಕು ಬೇಸಾಯ,
ರೈತ ಬಂಧುಗಳಿಗೆ ಸಾಂತ್ವನ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ರೈತರಿಗೆ
ಸಾಂತ್ವನ ತಿಳಿಸಿರುವ ಸಂದೇಶವುಳ್ಳ ಧ್ವನಿಸುರಳಿ, ಮಡಿಕೆ ಪತ್ರ, ಬೀದಿನಾಟಕ, ಜಾನಪದ
ಸಂಗೀತ, ವಸ್ತುಪ್ರದರ್ಶನ ಮತ್ತಿತರ ಕಾರ್ಯಕ್ರಮಗಳ ಮೂಲಕ ರೈತರಲ್ಲಿ ಧೈರ್ಯ ತುಂಬುವ
ಪ್ರಯತ್ನ ಇದಾಗಲಿದೆ.  ಆ. ೦೪ ರಿಂದ ೨೩ ರವರೆಗೆ ಜರುಗುವ ಈ ಕಾರ್ಯಕ್ರಮದಲ್ಲಿ ಪ್ರತಿದಿನ
೦೫ ಗ್ರಾಮಗಳಂತೆ ಒಟ್ಟು ೨೦೦ ಗ್ರಾಮಗಳಲ್ಲಿ ವಿಶೇಷ ವಾಹನ ಸಂಚರಿಸಲಿದೆ.  ಕಾರ್ಯಕ್ರಮದ
ಅವಧಿಯಲ್ಲಿ ನಿತ್ಯ ಎರಡು ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ ಹಾಗೂ ಐದೂ ಗ್ರಾಮಗಳಲ್ಲಿ
ಜಾನಪದ ಸಂಗೀತ, ಕಾರ್ಯಕ್ರಮ ಆಯೋಜಿಸಲಾಗಿದೆ.

     ಅ. ೦೪ ರಿಂದ ಈ ಕಾರ್ಯಕ್ರಮಕ್ಕೆ
ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ಹುಲಿಗಿ
ಗ್ರಾಮದಲ್ಲಿ ಚಾಲನೆ ನೀಡಿದ್ದು, ಮಂಗಳವಾರ ಮತ್ತು ಬುಧವಾರದಂದು ಕೊಪ್ಪಳ ತಾಲೂಕಿನ
ಗಿಣಿಗೇರಾ, ಗುಳದಳ್ಳಿ, ಬೂದಗುಂಪಾ, ಹಿಟ್ನಾಳ ಮತ್ತು ಅಗಳಕೇರಾ, ಶಿವಪುರ, ಹುಲಿಗಿ,
ಮುನಿರಾಬಾದ್, ಹೊಸಳ್ಳಿ, ಹಿರೇಬಗನಾಳ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ.  ಅ. ೦೬
ರಂದು ಗೊಂಡಬಾಳ, ಹಿರೇಸಿಂದೋಗಿ, ಕಾತರಕಿ-ಗುಡ್ಲಾನೂರ, ಮತ್ತೂರು.  ಆ. ೦೭ ರಂದು
ಬೆಟಗೇರಿ, ಬೋಚನಹಳ್ಳಿ, ಅಳವಂಡಿ, ಬಿಸರಳ್ಳಿ, ಹಲಗೇರಿ.  ಆ. ೦೮ ರಂದು ಓಜನಹಳ್ಳಿ,
ಭಾಗ್ಯನಗರ, ಕಿನ್ನಾಳ, ಇರಕಲ್ಲಗಡ, ಲೇಬಗೇರಿ.  ಆ. ೦೯ ರಂದು ಯಲಬುರ್ಗಾ ತಾಲೂಕಿನ
ಭಾನಾಪುರ, ತಳಕಲ್, ಬನ್ನಿಕೊಪ್ಪ, ಇಟಗಿ, ಮಂಡಲಗೇರಿ.  ಆ. ೧೦ ರಂದು ಬೆಣಕಲ್, ಕುಕನೂರು,
ರಾಜೂರು, ಸಂಗನಾಳ, ಕಲ್ಲೂರು.  ಆ. ೧೧ ರಂದು ಕರಮುಡಿ, ಮುಧೋಳ, ಹಿರೇಮ್ಯಾಗೇರಿ,
ಗೆದಿಗೇರಿ, ಚಿಕ್ಕಮ್ಯಾಗೇರಿ.  ಆ. ೧೨ ರಂದು ಶಿರೂರು, ಮಂಗಳೂರು, ಕುದರಿಮೋತಿ, ವಣಗೇರಿ,
ಬೇವೂರು.  ಆ. ೧೩ ರಂದು ಮುರಡಿ, ಗುನ್ನಾಳ, ಹಿರೇವಂಕಲಕುಂಟಾ, ಮಾಟಲದಿನ್ನಿ,
ತಾಳಕೇರಿ.  ಆ. ೧೪ ರಂದು ಗಂಗಾವತಿ ತಾಲೂಕಿನ ಗಾಣದಾಳ, ಗೌರಿಪುರ, ಕನಕಗಿರಿ, ಸುಳೇಕಲ್,
ಕರಡೋಣ.  ಆ. ೧೫ ರಂದು ನವಲಿ, ಬೇವಿನಾಳ, ಕಾರಟಗಿ, ಬೂದಗುಂಪಾ, ಯರಡೋಣ.  ಆ. ೧೬ ರಂದು
ಸಿದ್ದಾಪುರ, ಕುಂಟೋಜಿ, ಶ್ರೀರಾಮನಗರ, ಢಣಾಪುರ, ಮರಳಿ.  ಆ. ೧೭ ರಂದು ಹೊಸಕೇರಾ,
ಹಣವಾಳ, ಹೇರೂರು, ಗೂಗಿಬಂಡಿ, ಸಂಗಾಪುರ.  ಆ. ೧೮ ರಂದು ವಡ್ಡರಹಟ್ಟಿ, ಬಸಾಪಟ್ಟಣ,
ಆಗೋಲಿ, ವೆಂಕಟಗಿರಿ, ಮುಸಲಾಪುರ.  ಆ. ೧೯ ರಂದು ಬಿಜಕಲ್, ದೋಟಿಹಾಳ, ಮುದೇನೂರು,
ಜುಮ್ಲಾಪುರ, ತಾವರಗೇರಾ.  ಆ. ೨೦ ರಂದು ಕಿಲ್ಲಾರಹಟ್ಟಿ, ಮೇಣಿದಾಳ, ಹಿರೇಮನ್ನಾಪುರ,
ಗುಮಗೇರಾ, ಕಂದಕೂರು.  ಆ. ೨೧ ರಂದು ಹಿರೇಬನ್ನಿಗೋಳ, ಕೊರಡಕೇರಾ, ನಿಡಶೇಸಿ, ತಳುವಗೇರಾ,
ಚಳಗೇರಾ.  ಆ. ೨೨ ರಂದು ಅಡವಿಬಾವಿ, ಕಬ್ಬರಗಿ, ಕಾಟಾಪುರ, ಹೂಲಗೇರಾ, ಹನುಮಸಾಗರ.  ಆ.
೨೩ ರಂದು ಜಹಗೀರಗುಡದೂರು, ಹನುಮನಾಳ, ನಿಲೋಗಲ್, ಮಾಲಗಿತ್ತಿ, ಹಾಬಲಕಟ್ಟಿ ಗ್ರಾಮಗಳಲ್ಲಿ
ಕಾರ್ಯಕ್ರಮ ಜರುಗಲಿದೆ.
     ಈ ಕಾರ್ಯಕ್ರಮದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತಿಯ
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿ,
ಸಿಬ್ಬಂದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ
ಆರ್.ಆರ್. ಜನ್ನು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ
ಉದಪುಡಿ ಅವರು ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ.
ಅವರು ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!