೫ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಲ್ಲಮಪ್ರಭು ಬೆಟ್ಟದೂರು.

ಕೊಪ್ಪಳ-09- ನಗರದ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಇವರನ್ನು ೫ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ. ಇದೇ ಅಕ್ಟೋಬರ್ ತಿಂಗಳ ೧೭-೧೦-೨೦೧೫ ರಂದು ಶನಿವಾರ ಕೊಪ್ಪಳದ ಹಿಂದು ಮತ್ತು ಮುಸ್ಲಿಂರ ಭಾವೈಕ್ಯತೆಯ ತಾಣವಾ

ಗಿರುವ ಸಿರಸಪ್ಪಯ್ಯನ ಮಠದ ಕಲ್ಯಾಣ ಮಂಟಪದಲ್ಲಿ ೫ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ ಎಂದು ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿ.ಕಾ ಬಡೀಗೇರ ತಿಳಿಸಿದ್ದಾರೆ.
ನಿನ್ನೆ ಸಂಜೆ ಅಲ್ಲಮಪ್ರಭುಬೆಟ್ಟದೂರ ಮನೆಗೆ ತೆರಳಿ ಶಾಲು ಹೊದಿಸಿ ಸನ್ಮಾನ ಮಾಡುವದರ ಮೂಲಕ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ, ಜಿಲ್ಲಾ ಕೋಶಾಧ್ಯಕ್ಷ ಆರ್.ಎಸ್ ಸರಗಣಾಚಾರ, ಕೊಪ್ಪಳ ತಾಲೂಕಾ ಕಸಾಪ ಅಧ್ಯಕ್ಷ ಶಿ.ಕಾ. ಬಡಿಗೇರ, ಗೌರವ ಕಾರ್ಯದರ್ಶಿಗಳಾದ ಡಾ. ಪ್ರಕಾಶ ಬಳ್ಳಾರಿ, ಹುಸೇನಪಾಶಾ, ಉಪನ್ಯಾಸಕ ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್, ಡಿ.ಎಂ.ಬಡಿಗೇರ, ಬಾಲವಿಕಾಸ ಅಕ್ಯಾಡೆಮಿಯ ಗವಿಸಿದ್ದಪ್ಪ ಕರ್ಕಿಹಳ್ಳಿ, ಎಸ್.ಬಿ ಮಾಲಿಪಾಟೀಲ,ಹನುಮಂತಪ್ಪ ಜಳಕಿ, ವಾಸುದೇವ ಕುಲಕರ್ಣಿ, ಬಸಪ್ಪ ಬಾರಕೇರ ಶಾಂತಾದೇವಿ ಹಿರೇಮಠ, ಅರುಣಾ ನರೇಂದ್ರ, ಅನುಸೂಯಾ ಜಾಗೀರದಾರ, ಅಂಜನಾ ದೇವಿ ಕಲ್ಲೂರಕರ್, ವಿಜಯಲಕ್ಷ್ಮಿಕೊಟಗಿ ಭಾಗವಹಿಸಿದ್ದರು.

Leave a Reply