ಉಪಚುನಾವಣೆ : ಕಾಂಗ್ರೆಸ್ ,ಬಿಜೆಪಿ ಗೆಲುವು

ಕೊಪ್ಪಳ : ಕೊಪ್ಪಳ ನಗರಸಭೆಯ 2 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ -ಬಿಜೆಪಿ ಗೆಲುವು ಸಾಧಿಸಿವೆ. ಜೆಡಿಎಸ್ ಶಾಸಕ ಕರಡಿ ಸಂಗಣ್ಣ ಮುಖಭಂಗ ಅನುಭವಿಸಿದ್ದಾರೆ. ದಿ.26ರಂದು ನಡೆದ 2 ಹಾಗೂ 24 ವಾರ್ಡಗಳ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಿದ್ದೆ 2ನೇ ವಾರ್ಡನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೇವಮ್ಮ, 336 ಮತ ಪಡೆದು ಸಮೀಪದ ಪ್ರತಿಸ್ಪರ್ಧಿ ಜೆಡಿ ಎಸ್ ಅಭ್ಯರ್ಥಿಯನ್ನು 69 ಮತಗಳಿಂದ ಸೋಲಿಸಿದ್ದಾರೆ. 24ನೇ ವಾರ್ಡ್ ನಲ್ಲಿ ಬಿಜೆಪಿಯ ವಿಷ್ಣು ಗುಬ್ಬಿ 345 ಮತ ಪಡೆದು ಹತ್ತಿರ ಸ್ಪರ್ಧಿ ಎಸ್.ಎ.ಮಾಜೀದ್ ರನ್ನು 55 ಮತಗಳಿಂದ ಸೋಲಸಿದ್ದಾರೆ. ಕಾಂಗ್ರೆಸ್ ಮೊದಲಿನಂತೆ ತನ್ನ ಸ್ಥಾನ ಉಳಿಸಿಕೊಂಡಿದ್ದರೆ. ಬಿಜೆಪಿ 1 ಸ್ಥಾನ ಹೆಚ್ಚಿಸಿಕೊಂಡಿದೆ. 24ನೇ ವಾರ್ಡಿನಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಎಸ್.ಎ.ಮಾಜೀ್ ಇದು ಸತತ 3ನೇ ಸೋಲು. ಫಲಿತಾಂಶ ಪ್ರಕಟಣೆಗೊಂಡ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Leave a Reply